ಹಾವೇರಿ : ಬೀದರ್ ನಲ್ಲಿ ನಡೆದ ಬ್ಯಾಂಕ್, ಎಟಿಎಂ ದರೋಡೆ ಪ್ರಕರಣಗಳ ಹಿನ್ನಲೆ ಹಾವೇರಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕಮಾರ್ ಅಧಿಕಾರಿಗಳ ಸಭೆ ನಡೆಸಿದರು.
ಹಾವೇರಿ ಜಿಲ್ಲೆಯಾದ್ಯಂತ ಇರುವ ಪ್ರಮುಖ ಬ್ಯಾಂಕ್ ಗಳು, ಎಟಿಎಂ ಗಳಿಗೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಅಲ್ಲಿನ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.ಬ್ಯಾಂಕ್ , ಎಟಿಎಂ ಬಳಿ ಇರುವ ಸಿಸಿಟಿವಿಗಳು ಸರಿಯಾಗಿ ವರ್ಕ್ ಆಗ್ತಾ ಇದೆಯಾ? ಸೆಕ್ಯುರಿಟಿಗಾಗಿ ಸಿಬ್ಬಂದಿ ನೇಮಿಸಲಾಗಿದೆಯಾ ಎಂಬ ಬಗ್ಗೆ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಭದ್ರತೆ ಸಂಬಂಧಿಸಿದ ಬ್ಯಾಂಕ್ , ಎಟಿಎಂ ಸಿಬ್ಬಂದಿ ಜೊತೆ ಚರ್ಚೆ ನಡೆಸಿ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು. ಎಟಿಎಂ ಸೇರಿದಂತೆ ಬ್ಯಾಂಕಗಳ ಸುತ್ತ ಹದ್ದಿನಕಣ್ಣೀಡುವಂತೆ ಸೂಚಿಸಲಾಯಿತು. ಎಟಿಎಂಗಳಿಗೆ ಹಣ ತುಂಬುವ ವಾಹನಗಳ ಸೆಕ್ಯುರಿಟಿ ಕುರಿತಂತೆ ಮಾಹಿತಿ ಪಡೆಯಲಾಯಿತು.
PublicNext
19/01/2025 08:23 pm