ಹಾವೇರಿ: ಲಕ್ಷಾಂತರ ರೂಪಾಯಿ ಬೆಲೆಬಾಳುವ ವಿಳೆದ್ಯೆಲೆ ತೋಟವನ್ನ ದುಷ್ಕರ್ಮಿಗಳು ಹಾಳು ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ ನಡೆದಿದೆ. ಎರಡು ಲಕ್ಷ ರೂಪಾಯಿ ಬೆಲೆ ಬಾಳುವ 700 ಕ್ಕೂ ಅಧಿಕ ವಿಳೆದ್ಯೆಲೆ ಬಳ್ಳಿಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ.
ಹಾವೇರಿ ಜಿಲ್ಲೆ ಸವಣೂರಿನ ಬಸವರಾಜ್ ಮಟಿಗಾರ ಎಂಬುವರಿಗೆ ಸೇರಿದ ತೋಟದಲ್ಲಿ ಈ ಕುಕೃತ್ಯ ಎಸಗಿದ್ದಾರೆ. ಸುಮಾರು 2 ಲಕ್ಷ ಮೌಲ್ಯದ ವಿಳೆದ್ಯೆಲೆ ಬಳ್ಳಿಗಳನ್ನು ಆರೋಪಿಗಳು ನಾಶಪಡಿಸಿದ್ದಾರೆ.
ಈ ತೋಟದಿಂದ ಮುಂಬಯಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಗೆ ಎಲೆ ಮಾರಾಟ ಮಾಡಲಾಗುತ್ತಿತ್ತು.ಈ ಕುರಿತಂತೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
10/12/2024 07:29 pm