ಹಾಸನ: ಶಕ್ತಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ ಹಾಸನಾಂಬೆ ದೇವಿ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಣಾಳಿಕೆ ಬರೆದವನೇ ನಾನು,ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿಗಳನ್ನ ಐದು ವರ್ಷವೂ ಕೂಡ ಅನುಷ್ಠಾನ ಮಾಡ್ತೀವಿ ಅಂಥ ಹೇಳಿದ್ದೇವೆ. ಅನೇಕ ಸಂದರ್ಭದಲ್ಲಿ ವಿರೋಧ ಪಕ್ಷದವರು ಗ್ಯಾರೆಂಟಿ ನಿಲ್ಲಿಸುತ್ತಾರೆ ಅಂತ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು, ನಾವು ಸ್ಪಷ್ಟನೆ ನೀಡಿದ್ದೇವೆ ಯಾವ ಕಾರಣಕ್ಕೂ ಶಕ್ತಿ ಯೋಜನೆಯನ್ನು ನಾವು ನಿಲ್ಲಿಸುವುದಿಲ್ಲ ಎಂದರು.
ಕೆಲವು ಯೋಜನೆಗಳಿಂದ ಏಕೆ ಇಷ್ಟು ವೇಸ್ಟ್ ಮಾಡ್ತೀರಿ, ನಿಲ್ಲಿಸಿಬಿಡಿ ಅಂತ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ ನಾವು ಸರ್ಕಾರ, ಸರ್ಕಾರದಲ್ಲಿ ಯಾವುದೇ ಚರ್ಚೆ ಮಾಡಿಲ್ಲ. ಯಾವುದೇ ತೀರ್ಮಾನ ತಗೊಂಡಿಲ್ಲ, ತಗೊಳಲ್ಲ,ಅದರ ಬಗ್ಗೆ ಚರ್ಚೆನೇ ಆಗಿಲ್ಲ ಎಂದರು.
PublicNext
01/11/2024 12:37 pm