", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/416809_1737453776_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SantoshHassan" }, "editor": { "@type": "Person", "name": "8749017705" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹಾಸನ: ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ವತಿಯಿಂದ ಹನುಮ ಜಯಂತಿ ಅಂಗವಾಗಿ ಜನೆವರಿ 24 ರಿಂದ 25 ರ ವರೆಗೆ ವಿವಿಧ ಕಾರ್ಯಕ್ರಮಗಳು ಜರು...Read more" } ", "keywords": "Hassan, Hanuman Jayanti, January 24-25, Cultural Programs, Karnataka.,News", "url": "https://publicnext.com/article/nid/Hassan/News" }
ಹಾಸನ: ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ವತಿಯಿಂದ ಹನುಮ ಜಯಂತಿ ಅಂಗವಾಗಿ ಜನೆವರಿ 24 ರಿಂದ 25 ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಪರಿಷತ್ ನ ಜಿಲ್ಲಾಧ್ಯಕ್ಷ ಅನುಪ್ ತಿಳಿಸಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ವಿಶ್ವ ಹಿಂದೂ ಪರಿಷತ್ ಕಳೆದ ಹಲವು ವರ್ಷಗಳಿಂದ ಹಿಂದೂಗಳ ರಕ್ಷಣೆ ಹಾಗೂ ಅವರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡಿಕೊಂಡು ಬಂದಿದೆ, ಜೊತೆಗೆ ಪ್ರತೀ ವರ್ಷ ಹನುಮ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದು ಈ ವರ್ಷವೂ ಅದೇ ರೀತಿಯ ವಿಜೃಂಭಣೆಯ ಉತ್ಸವ ನಡೆಯಲಿದೆ ಎಂದರು.
ಮಠ ಮಂದಿರಗಳ ಪ್ರಮುಖ್ ರಕ್ಷಿತ್ ಭಾರದ್ವಾಜ್ ಮಾತನಾಡಿ, ಜನೆವರಿ 22 ಬುಧವಾರ ಬೆಳಿಗ್ಗೆ 9. ಗಂಟೆಗೆ ನಗರದ ಶ್ರೀ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ರಾಮತಾರಕ ಹೋಮ ನಡೆಯಲಿದ್ದು ಬೆಳಿಗ್ಗೆ 11.45 ಕ್ಕೆ ಪೂರ್ಣಾಹುತಿ ನೆರವೇರಲಿದೆ.
ಜನೆವರಿ 23 ಗುರುವಾರ ಸಂಜೆ 4.30 ಗಂಟೆಗೆ ಕುವೆಂಪು ನಗರದ ಪಂಚಮುಖಿ ಗಣಪತಿ ದೇವಸ್ಥಾನದಿಂದ ಹನುಮ ಸಂಕೀರ್ತನಾ ಯಾತ್ರೆ, ಜನೆವರಿ 24 ರ ಶುಕ್ರವಾರ ತಣ್ಣೀರುಹಳ್ಳ ಮಠದಿಂದ ಸಂಜೆ 4. ಗಂಟೆಗೆ ಬೃಹತ್ ಬೈಕ್ ಜಾಥಾ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜನವರಿ 25 ರಂದು ಮಧ್ಯಾಹ್ನ 2. ಗಂಟೆಗೆ ನಗರದ ಮಹಾವೀರ ವೃತ್ತದಿಂದ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಶೋಭಾಯಾತ್ರೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಲಿದ್ದು ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಶೋಭಾಯಾತ್ರೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಹಾಸನದ ಹಿಂದೂ ಬಾಂಧವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಶ್ರೀ ರಾಮ – ಹನುಮರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು. ಈ ವೇಳೆ ಮುಖಂಡರಾದ ಸಾಹಿ ಪ್ರಸಾದ್, ಪುಷ್ಪಾವತಿ, ಯಶವಂತ್, ಶಶಾಂಕ್, ರಕ್ಷಿತ್ ಭಾರದ್ವಾಜ್ , ಪ್ರಣವ್ ಇತರರು ಇದ್ದರು.
Kshetra Samachara
21/01/2025 03:32 pm