ಹಾಸನ: ಬೇಲೂರು ತಾ. ಬಿಕ್ಕೋಡು ಹೋಬಳಿ ದೊಡ್ಡಿಹಳ್ಳಿ ಗ್ರಾಮದ ಸರ್ಕಾರಿ ಜಾಗದಕ್ಕೆ ಅತಿಕ್ರಮ ಪ್ರವೇಶ ಮಾಡಿರುವವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಡಿಸಿ ಕಚೇರಿ ಎದುರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಆರ್. ಪಿ.ಐ ಸತೀಶ್ ಮಾತನಾಡಿ, ಬೇಲೂರು ತಾಲ್ಲೂಕು ಬಿಕ್ಕೋಡು ಹೋಬಳಿ ದೊಡ್ಡಿಹಳ್ಳಿ ಗ್ರಾಮದ ಸರ್ವೆ ನಂ. 58 ಹಾಗೂ 59 ರ ವಿಸ್ತೀರ್ಣ 35-00 ಎಕರೆ ಜಮೀನನ್ನು ಸರ್ಕಾರ ವಿವಾಧಿತ ಜಮೀನು ಎಂದು ತೀರ್ಮಾನಿಸಿ ಈ ಹಿಂದಿನ ಮಂಜೂರಾತಿಯನ್ನು ರದ್ದುಗೊಳಿಸಿ ಪಹಣಿಯಲ್ಲಿ ಸರ್ಕಾರಿ ಎಂದು ನಮೂದಿಸಿದ್ದರೂ ಸಹ ಕೆಲವು ಜಮೀನ್ದಾರಿ ಭೂ ಮಾಫಿಯಾಗಳು ಈ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿರುತ್ತಾರೆ. ಇವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮುಖಂಡರಾದ ಬೂದೇಶ್, ಕಾಂತರಾಜ್, ರೇವಣ್ಣ, ಶರತ್, ರಂಜಿತ್ ಇತರರು ಇದ್ದರು
Kshetra Samachara
13/01/2025 05:30 pm