ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧುಗಿರಿ : ಪಹಣಿ ತೆಗೆಯಲು ತಾಲೂಕು ಕಚೇರಿಯಲ್ಲಿ ಪೇಪರ್ ಇಲ್ವಂತೆ!?

ಮಧುಗಿರಿ : ಪಟ್ಟಣದ ತಾಲೂಕು ಕಚೇರಿಯಲ್ಲಿ ರೈತರಿಗೆ ಪಹಣಿ ನೀಡಲು ಪೇಪರ್ ಇಲ್ಲ ಎಂಬ ನೆಪವೊಡ್ಡಿ ಕಳೆದ ಒಂದು ವಾರದಿಂದ ಪಹಣಿ ವಿತರಿಸದೇ ರೈತರನ್ನು ಅಲೆದಾಡಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪೇಪರ್ ಕೊರತೆಯಿಂದ ಪಹಣಿ, ಎಂ.ಆರ್. ವಿತರಣೆ ಸಾಧ್ಯವಿಲ್ಲ ಎಂದು ಕಚೇರಿ ಸಿಬ್ಬಂದಿ ಕೈ ಬರಹದಲ್ಲಿ ಬರೆದು ನೋಟಿಸ್ ಹಾಕಿದ್ದಾರೆ.

ರೈತರಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಪಹಣಿ ಅತ್ಯಗತ್ಯ. ಆದರೆ ತಾಲೂಕು ಕಚೇರಿಯಲ್ಲಿ ಕಳೆದ ಒಂದು ವಾರದಿಂದ ಪಹಣಿ, ಎಂ.ಆರ್, ಪಡೆಯಲು ಪೇಪರ್ ಕೊರತೆ ಸೃಷ್ಟಿಯಾಗಿದ್ದು. ಪೇಪರ್ ಕಚೇರಿಗೆ ಸರಬರಾಜಾಗಿಲ್ಲ ಎಂಬ ನೆಪವೊಡ್ಡಿ ಕಳೆದ ಒಂದು ವಾರದಿಂದ ರೈತರನ್ನು ಪಹಣಿಗಾಗಿ ಅಧಿಕಾರಿಗಳು ಅಲೆದಾಡಿಸಿದ್ದಾರೆ. ಇನ್ನು ದೂರದೂರುಗಳಿಂದ ಕೆಲಸ ಕಾರ್ಯಗಳನ್ನು ತೊರೆದು ಪಹಣಿ ಪಡೆಯಲು ನಿತ್ಯ ತಾಲೂಕು ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ರೈತರದ್ದು.

ಈಗ ಬಿತ್ತನೆ ಸಮಯವಾಗಿದ್ದು, ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕಾದ ರೈತರು ಕೃಷಿ ಕಾರ್ಯಗಳನ್ನು ಬಿಟ್ಟು ಪಹಣಿಗಾಗಿ ಅಲೆದಾಡುತ್ತಿದ್ದಾರೆ.

ಪೇಪರ್ ತಂದರೆ ಪಹಣಿ ಕೊಡ್ತಾರೆ : ಇನ್ನು ತುರ್ತಾಗಿ ಪಹಣಿ ಬೇಕೆಂದರೆ ಪಹಣಿ ಪ್ರಿಂಟ್ ಹಾಕಲು ರೈತರೇ ಪೇಪರ್ ತಂದು ಕೊಟ್ಟು, ಪಹಣಿ ಶುಲ್ಕ ಪಾವತಿಸಿದರೆ ಮಾತ್ರ ಪಹಣಿ ನೀಡುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.ಪಟ್ಟಣದ ತಾಲೂಕು ಕಚೇರಿಯಲ್ಲಿ ಪಹಣಿ ಮುದ್ರಿಸುವ ಪೇಪರ್ ದಾಸ್ತಾನು ಇಲ್ಲದೇ ಪಹಣಿ ವಿತರಣೆಯಲ್ಲಿ ತೊಂದರೆಯಾಗಿರುವುದು ನಿಜ,ಜಿಲ್ಲಾಧ್ಯಂತ ಈ ಸಮಸ್ಯೆ ಇದ್ದು, ಸಂಬಂದಪಟ್ಟ ಏಜೆನ್ಸಿಯವರು ಪೇಪರ್ ಸರಬರಾಜು ಮಾಡದೆ ಇರುವುದರಿಂದ ಸಮಸ್ಯೆಯಾಗಿದೆ ಎಂದು ತಹಶೀಲ್ದಾರ್ ಸುರೇಶಾಚಾರ್, ಸಮಜಾಯಿಶಿ ನೀಡುತ್ತಿದ್ದು ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಮಸ್ಯೆಗೆ ತಿಲಾಂಜಲಿ ಇಡುವ ಅವಶ್ಯಕತೆ ಇದೆ.

ವರದಿ: ರಾಘವೇಂದ್ರ ದಾಸರಹಳ್ಳಿ

Edited By : Nirmala Aralikatti
PublicNext

PublicNext

13/07/2022 07:11 pm

Cinque Terre

21.45 K

Cinque Terre

1

ಸಂಬಂಧಿತ ಸುದ್ದಿ