ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತರುಣ್ ಕಪೂರ್ ಪ್ರಧಾನಿ ಮೋದಿ ಸಲಹೆಗಾರರಾಗಿ ನೇಮಕ

ನವದೆಹಲಿ: ನಿವೃತ್ತ ಐಎಎಸ್ ಅಧಿಕಾರಿ, ಪೆಟ್ರೋಲಿಯಂ ಇಲಾಖೆಯ ಮಾಜಿ ಕಾರ್ಯದರ್ಶಿ ತರುಣ್ ಕಪೂರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರನ್ನಾಗಿ ನೇಮಿಸಲಾಗಿದೆ.ಎರಡು ವರ್ಷಗಳ ಅವಧಿಗೆ ಇವರು ಈ ಹುದ್ದೆಯಲ್ಲಿ ಇರಲಿದ್ದಾರೆ. ಈ ಬಗ್ಗೆ ಕೇಂದ್ರದ ಕ್ಯಾಬಿನೆಟ್ ನೇಮಕಾತಿ ಸಮಿತಿ ಸೋಮವಾರ ಅಧಿಕೃತ ಮಾಹಿತಿ ನೀಡಿದೆ.

ಹಿಮಾಚಲ ಪ್ರದೇಶದ 1987ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ ತರುಣ್ ಕಪೂರ್. ಇನ್ನು ಭಾರತ ಸರ್ಕಾರದ ಕಾರ್ಯದರ್ಶಿ ಹಂತದ ಸ್ಥಾನಮಾನಗಳನ್ನು ಕಪೂರ್ ಅವರಿಗೆ ನೀಡಲಾಗುತ್ತದೆ. ಐಎಎಸ್ ಅಧಿಕಾರಿಗಳಾದ ಹರಿರಂಜನ್ ರಾವ್ ಮತ್ತು ಅತಿಶ್ ಚಂದ್ರ ಅವರನ್ನು ಪ್ರಧಾನಮಂತ್ರಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

Edited By : Nirmala Aralikatti
PublicNext

PublicNext

02/05/2022 09:15 pm

Cinque Terre

26.13 K

Cinque Terre

1

ಸಂಬಂಧಿತ ಸುದ್ದಿ