ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಚ್ಚೆಚ್ಚು ಮದ್ಯ ಕುಡಿಸಿ ಆದಾಯ ದ್ವಿಗುಣಗೊಳಿಸಿ : ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಟ್ಟ ಸರ್ಕಾರ

ಬೆಂಗಳೂರು : ಆದಾಯ ಗಳಿಕೆಗೆ ಮುಂದಾದ ಬೊಮ್ಮಾಯಿ ಸರ್ಕಾರ ಕುಡಿಯುವವರ ಸಂಖ್ಯೆ ಹೆಚ್ಚಿಸಿ ಎನ್ನುವ ಅರ್ಥದಲ್ಲಿ ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಟ್ಟಿದೆ. ಹೌದು 2022-23 ನೇ ಸಾಲಿನಲ್ಲಿ ಬರೋಬ್ಬರಿ 29 ಸಾವಿರ ಕೋಟಿ ಆದಾಯ ನೀಡುವಂತೆ ಬೊಮ್ಮಾಯಿ ಸರ್ಕಾರ ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಟ್ಟಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆದಾಯ ಸಂಗ್ರಹ ಗುರಿಯಲ್ಲಿ 4,420 ಕೋಟಿ ರೂ. ಹೆಚ್ಚಿಸಿದೆ. ಪ್ರಸಕ್ತ ವರ್ಷ ಬಜೆಟ್ನಲ್ಲಿಯೂ ಮದ್ಯ ದರವನ್ನು ಹೆಚ್ಚಿಸಿಲ್ಲ. ಹೀಗಿದ್ದರೂ, ದರ ಏರಿಸುವ ಬದಲು ‘ಜನರಿಗೆ ಹೆಚ್ಚು ಮದ್ಯ ಕುಡಿಸಿ, ಹೆಚ್ಚು ಆದಾಯ ಗಳಿಸಿ’ ತತ್ವಕ್ಕೆ ಸರ್ಕಾರ ಮುಂದಾಗಿದೆ. ಇದರಿಂದಾಗಿ ರಾಜ್ಯದ ಶೇ.85 ಹಳ್ಳಿಗಳಲ್ಲಿ ಈಗಾಗಲೇ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಸರ್ಕಾರವೇ ಪುಷ್ಠಿ ನೀಡಿದಂತಾಗಿದೆ.

2021-22ರಲ್ಲಿ 24,580 ಕೋಟಿ ಸಂಗ್ರಹ ಸರ್ಕಾರ ಗುರಿಯಾಗಿತ್ತು. ಆದರೆ ಈಗಾ 26,276 ಕೋಟಿ ಸಂಗ್ರಹವಾಗಿದೆ. ಒಟ್ಟಿನಲ್ಲಿ ಅಬಕಾರಿಯಿಂದ ಅಧಿಕ ಆದಾಯವಿದೆ ಎಂದು ತಿಳಿದ ಸರ್ಕಾರ ರಾಜ್ಯದಲ್ಲಿ ಮದ್ಯ ಹೆಚ್ಚು ಮಾರಾಟ ಆಗಬೇಕು, ಕುಡುಕರ ಸಂಖ್ಯೆ ಹೆಚ್ಚಾಗಬೇಕು ಎಂದು ಅಬಕಾರಿ ಇಲಾಖೆಗೆ ಟಾರ್ಗೆಟ್ ಕೊಟ್ಟಿದೆ.

Edited By : Nirmala Aralikatti
PublicNext

PublicNext

06/04/2022 04:09 pm

Cinque Terre

55.01 K

Cinque Terre

30

ಸಂಬಂಧಿತ ಸುದ್ದಿ