ನವದೆಹಲಿ: ಯುವತಿಯರ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸುವ ಬಾಲ್ಯ ವಿವಾಹ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಡಿಸಿದರು.
ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಇಂದು ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
‘ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಮಸೂದೆ–2021’ ಅನ್ನು ಮಂಡಿಸಿ ಮಾತನಾಡಿದ ಸಚಿವೆ ಇರಾನಿ, ‘ಯಾವುದೇ ಪದ್ಧತಿ, ಸಂಪ್ರದಾಯಗಳನ್ನು ಒಳಗೊಂಡಂತೆ ಮದುವೆಗೆ ಸಂಬಂಧಿಸಿ ಸದ್ಯ ಜಾರಿಯಲ್ಲಿರುವ ಎಲ್ಲ ಕಾಯ್ದೆಗಳು ಈ ಮಸೂದೆ ಅಂಗೀಕಾರಗೊಂಡ ನಂತರ ರದ್ದಾಗುವವು’ ಎಂದು ಹೇಳಿದರು.
PublicNext
21/12/2021 10:24 pm