ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭತ್ತ ಬೆಳೆದ ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ಬೆಂಗಳೂರು:ರಾಜ್ಯ ಸರ್ಕಾರ ಭತ್ತ ಬೆಳೆದ ರೈತರಿಗೆ ಸಿಹಿ ಸುದ್ದಿ ಕೊಟ್ಟಿದೆ. ಭತ್ತ ಖರೀದಿಗೆ ಬೆಂಬಲ ಬೆಲೆ ನಿಗದಿಪಡಿಸಿದೆ.ಭತ್ತ ಮಾರಾಟ ಮಾಡುವವರು ನೊಂದಣಿ ಪ್ರಾರಂಭಿಸಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ಆದೇಶ ಹೊರಡಿಸಿದೆ.

ಸಾಮಾನ್ಯ ಭತ್ತ ಕ್ವಿಂಟಾಲ್ ಗೆ 1,940 ರೂಪಾಯಿ ನಿಗದಿಪಡಿಸಿದೆ. ಎ ಗ್ರೇಡ್ ಭತ್ತಕ್ಕೆ 1,960 ರೂಪಾಯಿ ನಿಗದಿ ಪಡಿಸಿದೆ. ಈ ಬಗ್ಗೆ ಸಚಿವ ಉಮೇಶ್ ಕತ್ತಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ 2021-2022 ನೇ ಸಾಲಿನ ಮುಂಗಾರುನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 3.35 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲು ಅನುಮತಿ ನೀಡಿದೆ. ಉಡುಪಿ,ದಕ್ಷಿಣ ಕನ್ನಡ,ಕೊಪ್ಪಳ,ರಾಯಚೂರು,ಜಿಲ್ಲೆಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ನೋಂದಣಿ ಆರಂಭಿಸಲು ಸೂಚನೆ ನೀಡಲಾಗಿದೆ. ಒಂದು ತಿಂಗಳು ನೋಂದಣಿ ನಡೆಯಲಿದೆ ಎಂದು ಉಮೇಶ್ ಕತ್ತಿ ತಿಳಿಸಿದ್ದಾರೆ.

Edited By :
PublicNext

PublicNext

15/11/2021 12:43 pm

Cinque Terre

17.27 K

Cinque Terre

0

ಸಂಬಂಧಿತ ಸುದ್ದಿ