ಬೆಂಗಳೂರು ಗ್ರಾಮಾಂತರ: ಡೆಡ್ಲಿ ಸೋಂಕು ಕೊರೊನಾದಿಂದಾಗಿ ಆಗಬಾರದ ಅಲ್ಲೋಲ ಕಲ್ಲೋಲಗಳೆಲ್ಲ ನಡೆದು ಹೋಗಿವೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ತುಸು ಹೆಚ್ಚಾಗಿಯೇ ತಲೆದೋರಿದೆ.ಇದನ್ನು ಸರಿಪಡಿಸಲು ಸರ್ಕಾರ ಮಹತ್ತರವಾದ ಪ್ಲಾನ್ ವೊಂದನ್ನಾ ಜಾರಿ ಮಾಡಿದೆ.
ಹೌದು ನಿರುದ್ಯೋಗಿ ಯುವಕರಿಗೆ ಸರಕಾರ 'ಬಾ ಗುರು ಬೈಕ್ ತಗೋ' ಎಂಬ ಆಹ್ವಾನ ನೀಡುತ್ತಿದೆ..! ಯುವಕರಿಗೆ ಹೊಸ ಉದ್ಯೋಗಗಳಿಗೆ ಸಹಕಾರಿಯಾಗಲೆಂದು ಸರಕಾರ ಬೈಕ್ ಖರೀದಿಗೆ ಪ್ರೋತ್ಸಾಹ ನೀಡುತ್ತಿದೆ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಈ ಸೌಕರ್ಯ ಕಲ್ಪಿಸಲಾಗಿದೆ. ಈಗಾಗಲೇ ರಾಜ್ಯಾದ್ಯಂತ 700 ಅರ್ಜಿಗಳು ಸಲ್ಲಿಕೆಯಾಗಿದ್ದು, ಬ್ಯಾಂಕ್ ಗಳ ಜಂಟಿ ಸಹಕಾರದೊಂದಿಗೆ ಯೋಜನೆ ಜಾರಿಗೊಳಿಸಲು ನಿಗಮ ಸಿದ್ಧತೆ ನಡೆಸಿದೆ.
ಅಂತಿಮ ಹಂತದಲ್ಲಿ ಗೈಡ್ ಲೈನ್ಸ್ : ಜಿಲ್ಲಾವಾರು ಯೋಜನೆಗೆ ಅರ್ಜಿಗಳನ್ನು ಆನ್ ಲೈನ್ ಮೂಲಕ ಪಡೆಯಲಾಗುತ್ತಿದ್ದು, ಹಿಂದುಳಿದ ವರ್ಗಗಳಿಗೆ (ಕೆಟಗರಿ 1, 2, 2ಎ, 3ಎ, 3ಬಿ) ಒಳಪಟ್ಟಿರುವ 18 ರಿಂದ 55 ವರ್ಷ ವಯಸ್ಸಿನೊಳಗಿನವರು ಈ ಅವಕಾಶ ಬಳಸಿಕೊಳ್ಳಬಹುದು. ಈ ಹಿಂದೆ ಯಾವುದೇ ಬೈಕ್ ಖರೀದಿಸದವರು ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು.
ಈಗಾಗಲೇ ಅರ್ಜಿ ಸ್ವೀಕಾರ ಆರಂಭವಾಗಿದ್ದು, ಯಾವ ಬೈಕ್, ಎಷ್ಟು ಸಿಸಿ, ಎಷ್ಟು ಮೊತ್ತ ಕುರಿತ ಗೈಡ್ ಲೈನ್ಸ್ ಶೀಘ್ರ ಬಿಡುಗಡೆ ಮಾಡಲಿದೆ ಎಂದು ನಿಗಮ ತಿಳಿಸಿದೆ. ನಿಗಮದ ಹೆಸರಲ್ಲಿ ಬೈಕ್ ನೀಡಲಾಗುತ್ತಿದ್ದು ಲೋನ್ ಕ್ಲಿಯರನ್ಸ್ ಆಗುವವರೆಗೆ ಬೈಕ್ ಮೇಲೆ ನಿಗಮದ ಹೆಸರಿರಲಿದೆ.
PublicNext
25/01/2021 11:14 am