ಮೈಸೂರು: ಮೈಸೂರು ಮಹಾನಗರ ಪಾಲಿಕೆಯು ನಗರದಲ್ಲಿರುವ 93 ದೇವಾಲಯಗಳ ತೆರವಿಗೆ ಸಿದ್ಧತೆ ನಡೆಸಿದೆ. ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಸಂಬಂಧ ಮಹಾನಗರ ಪಾಲಿಕೆಯು ದೇವಸ್ಥಾನ ಪಟ್ಟಿಯೊಂದನ್ನು ಸಿದ್ಧಪಡಿಸಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಈ ಪಟ್ಟಿಯಲ್ಲಿ ಅಗ್ರಹಾರದ 101 ಗಣಪತಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ದೇವಾಲಯ, ಇಟ್ಟಿಗೆಗೂಡು ದುರ್ಗಾ ಪರಮೇಶ್ವರಿ, ನ್ಯೂ ಸಯ್ಯಾಜಿರಾವ್ ಪಂಚಮುಖಿ ಗಣಪತಿ ದೇವಾಲಯ, ವಿಜಯನಗರದ ಚಾಮುಂಡೇಶ್ವರಿ ದೇವಾಲಯ, ಶಾರದಾ ದೇವಿ ನಗರದ ಪಾರ್ಕ್ನಲ್ಲಿರುವ ಪಂಚಮುಖಿ ಗಣಪತಿ, ವಿವಿ ಮಾರುಕಟ್ಟೆಯ ನವಗ್ರಹ ದೇವಸ್ಥಾನ ಹೀಗೆ 93 ದೇಗುಲಗಳ ಹೆಸರು ಆ ಪಟ್ಟಿಯಲ್ಲಿದೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಕೆಲವು ದೇವಸ್ಥಾನಗಳ ಆಡಳಿತ ಮಂಡಳಿಯು ತಮ್ಮ ದೇಗುಲಗಳ ತೆರವು ಮಾಡದಂತೆ ನಿಷೇಧಾಜ್ಞೆ ತಂದಿದ್ದಾರೆ.
PublicNext
12/09/2021 03:41 pm