ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆದ್ದಾರಿ ಸಚಿವಾಲಯದ ಆದೇಶ : ಜ.1ರಿಂದ ದೇಶಾದ್ಯಂತ ಫಾಸ್ಟಾಗ್ ಕಡ್ಡಾಯ

ಹೊಸದಿಲ್ಲಿ: ಎಲ್ಲ ಚತುಶ್ಚಕ್ರ ವಾಹನಗಳಿಗೆ ಫಾಸ್ಟಾಗ್ ಕಡ್ಡಾಯಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶನಿವಾರ ಆದೇಶ ಹೊರಡಿಸಿದೆ.

ಅಧಿಕೃತ ಆದೇಶ ಜನವರಿ 1ರಿಂದ ದೇಶಾದ್ಯಂತ ಜಾರಿಯಾಗಲಿದೆ.

2017ರ ಡಿ.1ಕ್ಕಿಂತ ಮುನ್ನ ಮಾರಾಟವಾದ ವಾಹನಗಳಿಗೆ ಇದು ಅನ್ವಯವಾಗಲಿದೆ.

2017ರ ಡಿಸೆಂಬರ್ ನ ಅನಂತರ ಮಾರಾಟವಾದ ಎಲ್ಲ ವಾಹನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೆ ಮುನ್ನವೇ ಫಾಸ್ಟಾಗ್ ಅಳವಡಿಸಿರಲಾಗುತ್ತದೆ.

ಇದೇ ವೇಳೆ ವಾಹನವು ಫಾಸ್ಟಾಗ್ ಹೊಂದಿದ್ದರೆ ಮಾತ್ರ ಅದರ ಫಿಟ್ನೆ ಸ್ ಪ್ರಮಾಣಪತ್ರ ನವೀಕರಿಸಲಾಗುತ್ತದೆ ಎಂದೂ ಸಚಿವಾಲಯ ತಿಳಿಸಿದೆ.

Edited By : Nirmala Aralikatti
PublicNext

PublicNext

08/11/2020 07:34 am

Cinque Terre

55.71 K

Cinque Terre

3

ಸಂಬಂಧಿತ ಸುದ್ದಿ