ನವದೆಹಲಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ರೈತರು ನಿರಂತರ ಹೋರಾಟದಲ್ಲಿದ್ದಾರೆ.
ವಿವಾದಿತ ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದರೂ, ದೆಹಲಿ ಬಿಟ್ಟು ತೆರಳುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಮೂರು ಕಾಯ್ದೆಗಳನ್ನು ಹಿಂಪಡೆಯುವವರೆಗೆ ನಾವ್ ಮನೆಗೆ ಹೋಗುವುದಿಲ್ಲ,ಹೋರಾಟ ಹಿಂಪಡೆಯುವುದಿಲ್ಲ ಎನ್ನುವ ತಮ್ಮ ನಿಲುವನ್ನು ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ಸಂಘದ ಅಧ್ಯಕ್ಷ ರಾಕೇಶ್ ತಿಕಾಯತ್, ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ಪಡೆಯುವ ವರೆಗೆ ನಿರ್ಗಮಿಸಲಾರೆವು ಎಂದಿದ್ದಾರೆ.
ಈ ಹಿಂದೆ ತೀರ್ಮಾನಿಸಿದಂತೆ ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ಟ್ರ್ಯಾಕ್ಟರ್ rally ನಡೆಯಲಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರೈತ ಸಂಘಟನೆಗಳು ಅಧ್ಯಯನ ನಡೆಸಲಿದ್ದು, ಕಾನೂನು ಸಮಿತಿಯೊಂದಿಗೆ ಸಮಾಲೋಚನೆ ನಡೆಸಿ ಮುಂದಿ ಹೋರಾಟದ ಬಗ್ಗೆ ರೂಪುರೇಶೆ ತಯಾರಿಸಲಾಗುವುದು ಎಂದು ತಿಕಾಯತ್ ಹೇಳಿದ್ದಾರೆ.
PublicNext
12/01/2021 06:31 pm