ಗದಗ: ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಅಖಿಲ ಭಾರತ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ಎ ಶ್ರೇಣಿಯ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಜಿಲ್ಲೆಯ ನರಗುಂದದಲ್ಲಿ ಅ.12ರಿಂದ 14ರವರಿಗೆ ಅಖಿಲ ಭಾರತ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ಎ ಶ್ರೇಣಿಯ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವನ್ನು ಸಾಯಂಕಾಲ 4ಕ್ಕೆ ಉದ್ಘಾಟನೆ ಮಾಡಲಾಗುತ್ತದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಕರಾಗಿ ಆಗಮಿಸಲು ತಾತ್ವಿಕ ಒಪ್ಪಿಗೆ ನೀಡಿರುತ್ತಾರೆ ಎಂದರು.
ಕಬಡ್ಡಿ ಪಂದ್ಯಾವಳಿಗೆ ಇತರೆ ರಾಜ್ಯಗಳಾದ ಹಿಮಾಚಲ ಪ್ರದೇಶ,ದೆಹಲಿ,ಮಹಾರಾಷ್ಟ್ರ,ಗುಜರಾತ ಸೇರಿಸಂತೆ ಭಾರತೀಯ ಸೇನಾ ಪಡೆಯ ಪುರುಷ ಮತ್ತು ಮಹಿಳಾ ತಂಡಗಳು ಸೇರಿ ಒಟ್ಟು 65 ತಂಡಗಳು ಭಾಗವಗಹಿಸಲಿವೆ.ನಿರ್ಣಾಯಕರಾಗಿ ಅಂತರಾಷ್ಟ್ರೀಯ, ರಾಷ್ಟ್ರೀಯ ಕೋಚ್ ಆಗಮಿಸಲಿದ್ದು, ಈ ಪಂದ್ಯಾವಳಿಯಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಆಟಗಾರರು ಭಾಗವಹಿಸಲಿದ್ದಾರೆ.ಪಂದ್ಯಾವಳಿಯ ವೀಕ್ಷಕ ವಿವರಣೆಗಾಗಿ ಅಂತರಾಷ್ಟ್ರೀಯ ಕಬಡ್ಡಿ ತರಬೇತಿದಾರ ಡಾ.ಈಶ್ವರ ಅಂಗಡಿ ಹಾಗೂ ರಾಜ್ಯದಿಂದ ವಿಶೇಷ ಅಧಿಕಾರಿಯಾಗಿ ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಅಖಿಲ ಭಾರತ ಸ್ಪೋರ್ಟ್ಸ ಕೌನ್ಸಿಲಿಂಗ್ ಸದಸ್ಯ ಡಾ.ಹೊನ್ನಪ್ಪಗೌಡ ನೇಮಕಗೊಂಡಿರುತ್ತಾರೆ ಎಂದು ಹೇಳಿದರು.
ಈ ವೇಳೆ ಸಿ.ಸಿ.ಪಾಟೀಲ ಅಭಿಮಾನಿ ಬಳದ ಅಧ್ಯಕ್ಷ ಮಲ್ಲಪ್ಪ ಮೇಟಿ, ಲಕ್ಕುಂಡಿ ಮಂಡಲ ಭಾಜಪ ಅಧ್ಯಕ್ಷ ನಿಂಗಪ್ಪ ಮಣ್ಣೂರ,ಹೊಳೆಆಲೂರು ಮಂಡಲ ಭಾಜಪ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ,ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಮೋಹನ ಕಲಹಾಳ,ಕಬಡ್ಡಿ ಕ್ರೀಡಾಪಟು ಚನ್ನಯ್ಯ ಸಂಗಳಮಠ,ವಸಂತ ಮೇಟಿ ಇದ್ದರು.
Kshetra Samachara
27/09/2022 08:35 pm