ಗದಗ: ಗದಗನ ಮುಳಗುಂದ ನಾಕಾ ಬಳಿ ಇರುವ ಅಡವೀಂದ್ರಸ್ವಾಮಿ ಮಠದ ಶ್ರೀ ಅನ್ನಪೂರ್ಣೆಶ್ವರಿದೇವಿ 8ನೇ ವರ್ಷದ ಜಾತ್ರಾ ನಿಮಿತ್ತ ಮಹಾರಥೋತ್ಸವ ಮಹಿಳೆಯರಿಂದ ಜರುಗಿತು.
ಬದಾಮಿ ತಾಲೂಕಿನ ಗೋನಾಳ ಗ್ರಾಮದ ಬಸವೇಶ್ವರ ಭಜನಾ ಮಂಡಳಿ,ಗದುಗಿನ ರಾಚೋಟಿ ವೀರಭದ್ರೇಶ್ವರ ಪುರವಂತರ ಸಂಘ ಹಾಗೂ ಗದುಗಿನ ಗುಲಾಬ ಬ್ಯಾಂಡ್ ಕಲಾ ತಂಡ ಸೇರಿದಂತೆ ಇತರ ಕಲಾತಂಡಗಳ ವಾದ್ಯ ವೈಭವದೊಂದಿಗೆ ಮಠಾಧೀಶರ ಸಾನಿಧ್ಯದಲ್ಲಿ ಮಹಿಳೆಯರು ದೇವಿಯ ತೇರನ್ನು ಮುಂದೆ ಸಾಗಿಸಿದರು.
ಶ್ರೀಮಠದ ಧರ್ಮದರ್ಶಿ ವೇ.ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಸಮಿತಿಯ ಅಧ್ಯಕ್ಷ ಮೋಹನ ಗ್ವಾರಿ, ಶಿವಾನುಭವ ಸಮಿತಿಯ ಅಧ್ಯಕ್ಷ ಜಿ.ಎಂ.ಯಾನಮಶೆಟ್ಟಿ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಾಬಾಯಿ ಬಾಕಳೆ ಅವರ ನೇತೃತ್ವದಲ್ಲಿ ಗೀತಾ ಹೂಗಾರ, ಲಲಿತಾ ಹಿರೇಮಠ, ಶಾಂತಕ್ಕ ಹಿರೇವಡೆಯರ, ಲೀಲಾವತಿ ಬಿಳೇಯಲಿ, ಸುರೇಖಾ ಪಿಳ್ಳಿ, ಕಸ್ತೂರಿಬಾಯಿ ಭಾಂಡಗೆ, ಗಿರಿಜಾ ನಾಲತ್ವಾಡಮಠ, ಶಾಂತಾ ಸಂಕನೂರ, ಪ್ರೇಮಾ ಗ್ವಾರಿ, ಜಯಶ್ರೀ ಉಗಲಾಟದ, ಗೌರಾದೇವಿ ಶಾಬಾದಿಮಠ ಸೇರಿದಂತೆ ನೂರಾರು ಮಹಿಳಾ ಭಕ್ತರು ಪಾಲ್ಗೊಂಡಿದ್ದರು.
PublicNext
07/10/2022 08:43 pm