ಲಕ್ಷ್ಮೇಶ್ವರ: ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಹಣದ ಆಮಿಷಕ್ಕೆ ಒಳಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ 4 ಭೋವಿ ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದಾರೆ.
ಕುಟುಂಬ ಸದಸ್ಯರ ಆಶಯದಂತೆ ಹಿಂದೂ ಜಾಗರಣ ವೇದಿಕೆಯು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಸಾಪುರ ಗ್ರಾಮದಲ್ಲಿ ಗವಿಮಠ ಶ್ರೀಗಳಾದ ಡಾ. ಕುಮಾರ ಮಹಾರಾಜರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಕುಟುಂಬಸ್ಥರನ್ನು ಮೂಲ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಘರ್ ವಾಪ್ಸಿಯಾದ ಕುಟುಂಬಸ್ಥರು, ಕ್ರಿಶ್ಚಿಯನ್ ಧರ್ಮ ಸ್ವೀಕರಿಸಲು ನನಗೆ ಸಂತೋಷವಿರಲಿಲ್ಲ. ಮತಾಂತರವು ನನಗೆ ಅಥವಾ ನನ್ನ ಕುಟುಂಬ ಸದಸ್ಯರಿಗೆ ಸಹಾಯ ಮಾಡಲಿಲ್ಲ. ಇದೀಗ ನಮ್ಮ ಧರ್ಮಕ್ಕೆ ಮರಳಲು ಸಂತೋಷದಿಂದ ಬಯಸುತ್ತಿದ್ದೇವೆ ಎಂದು ಹೇಳಿದರು.
- ಗೌರೀಶ ನಾಗಶೆಟ್ಟಿ, ಪಬ್ಲಿಕ್ ನೆಕ್ಸ್ಟ್ ಲಕ್ಷ್ಮೇಶ್ವರ
PublicNext
30/11/2024 07:53 am