ಗದಗ: ಖಾನ್ ನನ್ಮಕ್ಳು ದೇಶ ಬಿಟ್ಟು ಹೋಗಲಿ. ಅವನ್ಯಾವನೋ ಅಮೀರ್ ಖಾನ್ ಅಂತೆ. ಅವನಿಗೆ ಭಾರದಲ್ಲಿ ಇರಲು ಭಯ ಆಗುತ್ತಂತೆ ಹಾಗಿದ್ದರೆ ನೀನು ಪಾಕಿಸ್ತಾನಕ್ಕೆ ಹೋಗಿ ನೆಗೆದು ಬೀಳು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯ ಮುನ್ನ ನಡೆಸದ ಸಭೆಯಲ್ಲಿ ಮಾತನಾಡಿದರು.
ಈ ಖಾನ ನನ್ನ ಮಕ್ಕಳು ಭಾರತದಲ್ಲಿ ಹಣ ಗಳಿಸಿ ಪಾಕಿಸ್ತಾನದಲ್ಲಿ ಭೂಕಂಪ ಆದರೆ ಅಲ್ಲಿಗೆ ಹಣ ಕೊಟ್ಟು ಕಳುಹಿಸುತ್ತಾರೆ. ಅಷ್ಟು ಪ್ರೀತಿ ಇದ್ದರೆ ಇವರೂ ಅಲ್ಲಿಗೇ ಹೋಗಲಿ ಎಂದು ಕಿಡಿಕಾರಿದರು.
PublicNext
19/09/2022 09:35 am