ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಬೆಳೆಹಾನಿ ವೀಕ್ಷಿಸಲು ಬಂದ ಸಚಿವರ ಎದುರು ರೈತ‌ ಮಹಿಳೆ ಕಣ್ಣೀರು

ಗದಗ : ಗದಗ ಜಿಲ್ಲೆಯಲ್ಲಿ ನರಗುಂದ ಶಾಸಕ ಹಾಗೂ ಲೋಕೋಪಯೋಗಿ‌ ಸಚಿವ ಸಿ.ಸಿ.ಪಾಟೀಲ ವಿವಿಧ ಗ್ರಾಮಗಳಿಗೆ ತೆರಳಿ, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ‌ ಕೈಗೊಂಡಿದ್ದಾರೆ.

ಈ ವೇಳೆ ಸಚಿವರ ಎದುರೇ ರೈತ ಮಹಿಳೆ‌ ಕಣ್ಣೀರು‌ ಹಾಕಿದ ಘಟನೆ ಕೂಡ‌ ನಡೆದಿದೆ. ಗದಗ ತಾಲೂಕಿನ ಹೊಂಬಳ‌ ಗ್ರಾಮದ ಹೊರ ವಲಯದಲ್ಲಿ ಹಳ್ಳದ ರಭಸಕ್ಕೆ ಫಲವತ್ತಾದ‌ ಮಣ್ಣು‌ ಸಮೇತ ಬೆಳೆ ಕೊಚ್ಚಿಕೊಂಡು ಹೋದ ಪ್ರದೇಶಕ್ಕೆ ಅಧಿಕಾರಿಗಳ ಸಮೇತ ಸಚಿವರು ಭೇಟಿ ನೀಡಿದ್ದರು.

ಈ ವೇಳೆ ಹೊಂಬಳ ಗ್ರಾಮದ ಸುಮಿತ್ರಾ ವಡ್ಡರ್ ಎನ್ನುವ ರೈತ ಮಹಿಳೆ, ಸಚಿವರ ಎದುರು ತನ್ನ ಕಷ್ಟ ತೋಡಿಕೊಳ್ಳುತ್ತಾ ಇಷ್ಟು‌ ದಿನ ಕಷ್ಟಪಟ್ಟು ಬೆಳೆದ ಬೆಳೆ ಎಲ್ಲವೂ ಸರ್ವನಾಶವಾಗಿದೆ. ಬಿತ್ತಿದ ಬೆಳೆಯೂ ಇಲ್ಲಾ, ಮುಂದೆ ಬಿತ್ತನೆ ಮಾಡೋಕೆ ನಮ್ಮ ಭೂಮಿಯೂ ನಮಗಿಲ್ಲಾ, ಮುಂದಿನ ಬದುಕಿಗೆ ನಮಗೆ ದಾರಿ ಮಾಡಿಕೊಡಿ ಅಂತ ಮಹಿಳೆ ಗಳಗಳನೆ ಕಣ್ಣೀರು‌ ಹಾಕಿದ್ದು, ಸಚಿವರು ಸಮಾಧಾನದ ಉತ್ತರ ನೀಡಿದ್ದಾರೆ.

Edited By : Manjunath H D
PublicNext

PublicNext

09/09/2022 01:31 pm

Cinque Terre

32.29 K

Cinque Terre

1