ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಗರ ಹಾವು ಹಾಗೂ ಶ್ವಾನಗಳ‌ ಕಾಳಗ: ಸುರಕ್ಷಿತ ಸ್ಥಳಕ್ಕೆ ನಾಗರಹಾವು

ಗದಗ: ಗದಗ ಜಿಲ್ಲೆಯಲ್ಲಿ ಮತ್ತೆ ನಾಗರ ಹಾವು ಹಾಗೂ ಶ್ವಾನ ಗುಂಪುಗಳ ಭಯಂಕರ ಕಾಳಗ ನಡೆದಿದೆ‌.ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಸಂಗಮೇಶ ಕೊಳ್ಳಿಯವರ ಜನಸಂಪರ್ಕ ಕಚೇರಿ ಆವರಣದಲ್ಲಿ ಬೃಹತ್ ನಾಗರ ಹಾವು ಎಂಟ್ರಿಯಾಗಿದೆ.ಕಳೆದ ತಿಂಗಳಷ್ಟೇ ಇವೇ ಶ್ವಾನಗಳು ಹಾವನ್ನು ತಡೆದಿದ್ವು. ಇದೀಗ ಮತ್ತೆ ಹಾವು ಕಂಡ ಶ್ವಾನಗಳ ಟೀಮ್ ಕಾಳಗಕ್ಕೆ ಸಜ್ಜಾಗಿವೆ.

ನಾಗರ ಹಾವನ್ನ ಮಿಸುಕಾಡಲು ಬಿಟ್ಟಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರ ಹಾವೊಂದು ಗೋಡೆಯ ಪಕ್ಕದಲ್ಲಿ ಸುಳಿದಾಡುತ್ತಿತ್ತು. ಕಂಪೌಂಡ್ನೊಳಗಿದ್ದ ನಾಯಿಗಳ ಗುಂಪು ಈ ನಾಗರ ಹಾವನ್ನು ಕಂಡು ಜೋರಾಗಿ ಬೊಗಳಲು ಶುರು ಮಾಡಿದವು. ಅದಾಗಲೇ ಹೊರಹೋಗಲು ತಿಳಿಯದೇ ಕಂಗಾಲಾಗಿದ್ದ ನಾಗರ ಹಾವು ಈ ನಾಯಿಗಳ ಗುಂಪನ್ನು ಕಂಡು ಮತ್ತಷ್ಟು ದಿಗಿಲುಗೊಂಡು ಹೆಡೆಯೆತ್ತಿ ಪ್ರತಿರೋಧವೊಡ್ಡೊದಕ್ಕೆ ಮುಂದಾಗಿತ್ತು. ಅರ್ಧ ಗಂಟೆಗೂ ಹೆಚ್ಚು ಕಾಲ ಶ್ವಾನಗಳ ಗುಂಪು ಹಾವನ್ನ ತಡೆದು ನಿಲ್ಲಿಸಿದವು.

ಈ ವಿಷಯವನ್ನು ಉರಗಪ್ರಿಯ ಸ್ನೇಕ್ ಬುಡ್ಡಾಗೆ ತಿಳಿಸಿದ್ದಾರೆ, ಸ್ಥಳಕ್ಕೆ ಬಂದ ಸ್ನೇಕ್ ಬುಡ್ಡಾ, ನಾಗರಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದಿದ್ದಾರೆ.

Edited By : PublicNext Desk
PublicNext

PublicNext

09/10/2022 01:16 pm

Cinque Terre

28.16 K

Cinque Terre

0