ಗದಗ: ಜಿಲ್ಲೆಯ ಮುಳಗುಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳಿಗೆ ವ್ಯಾಪಕವಾಗಿ ಹರಡುತ್ತಿರುವ ಚರ್ಮಗಂಟು ರೋಗವನ್ನು ವ್ಯಾಕ್ಸಿನ್ ಮೂಲಕ ತಡೆಗಟ್ಟಲು ಕೂಡಲೇ ಕ್ರಮ ಕೈಗೊಳ್ಳಬೇಕು. ಎಂದು ಪಶು ಇಲಾಖೆ ನಿರ್ದೇಶಕರಗೆ ಪ.ಪಂ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸ್ಥಳೀಯ ಘಟಕದ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಿದರು.
ವ್ಯಾಪಕವಾಗಿ ಹರಡುತ್ತಿರುವ ಚರ್ಮಗಂಟು ರೋಗವು ಜಾನುವಾರುಗಳಿಗೆ ಆವರಿಸಿ ಸಾಂಕ್ರಾಮಿಕವಾಗಿ ಹರಡುತ್ತಿರುವ ಪರಿಣಾಮವಾಗಿ ಅವುಗಳ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ. ಕೂಡಲೇ ಚಿಕಿತ್ಸೆ ನೀಡಿ ರೈತರ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು. ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ, ಗುಡುಸಾಬ ಗಾಡಿ,ದೇವರಾಜ ಸಂಗನಪೇಟಿ,ಕಿರಣ ಕುಲಕರ್ಣಿ,ಮಹಾಂತೇಶ ಗುಂಜಳ,ಮಂಜುನಾಥ ಕಬಾಡಿ, ಪ್ರಭು ಲದ್ದಿ ಹಾಗೂ ರೈತರು ಇದ್ದರು.
Kshetra Samachara
25/09/2022 08:58 am