ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಕಾಲುವೆ ನಿರ್ಮಿಸಲು ಕಲುಸಿತ ನೀರನ್ನು ಬೇರೆಡೆ ಕಳಿಸಲು ಮನವಿ

ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪ್ರಸಿದ್ಧ ಕೆರೆ ಇಟ್ಟಿಗೇರಿ ಇತ್ತೀಚಿಗೆ ಮಳೆಗೆ ಅದರಂಚಿನ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿಕೊಂಡು ಬಹಳಷ್ಟು ತೊಂದರೆಯಾಗಿದೆ. ಈಗಾಗಲೇ ಕಳೆದ 22 ದಿನಗಳ ಮೇಲ್ಪಟ್ಟ ಮನೆಗಳು ನೀರಿನಲ್ಲಿ ನಿಂತಿರುತ್ತದೆ ಕಾರಣ ಸಾಧ್ಯವಾದಷ್ಟು ಬೇಗನೆ ಅಲ್ಲಿರುವ ಮನೆಗಳನ್ನು ಸಂರಕ್ಷಿಸಬೇಕು ಎಂದು ಪಟ್ಟಣದ ಹಿರಿಯ ಸಾಹಿತಿ, ಮುಖಂಡ ಪಿ ಬಿ ಕರಾಟೆ ಹೇಳಿದರು.

ಅವರು ತಹಶೀಲ್ದಾರ ಪರಶುರಾಮ ಸತ್ತಿಗೇರಿ ಮನವಿ ಸಲ್ಲಿಸಿ ಮಾತನಾಡುತ್ತ ಕೆರೆಯ ಒತ್ತುವರಿ ಪ್ರದೇಶವನ್ನು ರಕ್ಷಣೆ ಮಾಡಿ ಆದಷ್ಟು ಬೇಗನೆ ತೆರವುಗೊಳಿಸುವುದರ ಜೊತೆಗೆ ಕೆರೆಯ ಉತ್ತರ ಹಾಗೂ ದಕ್ಷಿಣ ಮಾರ್ಗದಲ್ಲಿ ತಡೆಗೋಡೆಯನ್ನು ಕಲ್ಲಿನ ಕಟ್ಟಡ ಮತ್ತು ಕಾಂಕ್ರಿಟ ನಿಂದ ನಿರ್ಮಾಣ ಮಾಡಿ ಕೆರೆಗೆ ಬಂದು ಸೇರುವಂತಹ ಮಲಮೂತ್ರ ಕಳುಷಿತ ಕೆರೆ ನೀರನ್ನು ಬೇರೆಡೆ ಕಳಿಸಬೇಕು ಕೆರೆ ತುಂಬಿದ ನಂತರ ನೀರು ಹರಿದು ಹೋಗಲಿಕ್ಕೆ 1.5ಕಿಲೋಮೀಟರ್ ವರೆಗೂ ರಾಜಕಾಲುವೆ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಂಕರ ಬ್ಯಾಡಗಿ, ಎಮ್ ಎಮ್ ಉಮಚಗಿ,ಈರಯ್ಯ ಹಿರೇಮಠ,ಸೋಮೇಶ ಉಪನಾಳ,ನೀಲಕಂಠಪ್ಪ ಬಂಕಾಪುರ,ವೈ ಕೆ ಪಾಸ್ತೆ,ಎಸ್ ಜಿ ಹಿರೇಮಠ,ಎನ್ ಆರ್ ಸಾತಪುತೆ,ನಾಗರಾಜ ಚಿಂಚಲಿ, ಡಿ ವಿ ಶೆಟ್ಟರ, ಮುತ್ತು ಹೆಬ್ಬಾಳ, ರಾಜಣ್ಣ ಅಂಕಲಕೋಟಿ, ಕೆರೆಯ ಅಂಚಿನ ನಿವಾಸಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/09/2022 04:53 pm

Cinque Terre

6.16 K

Cinque Terre

0

ಸಂಬಂಧಿತ ಸುದ್ದಿ