ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಜಿಲ್ಲಾಡಳಿತ ಭವನದಲ್ಲಿ ಮಹಾತ್ಮ ಗಾಂಧೀಜಿಯವರ 155 ನೇ ಜನ್ಮದಿನಾಚರಣೆ

ಗದಗ: ಜಗತ್ತು ಕಂಡ ಮಹಾನ್ ನಾಯಕರುಗಳಾದ ರಾಷ್ಟçಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ ಶಾಸ್ತ್ರಿ ಜಿಯವರು ದೇಶಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ತಿಳಿಸಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಜಿಲ್ಲಾಡಳಿತ ಭವನದಲ್ಲಿ ಜರುಗಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆ ಹಾಗೂ ಪ್ರೇಮ ಎಂಬ ಮೂರು ಅಸ್ತ್ರಗಳಿಂದ ಹೋರಾಡಿ ನಮ್ಮ ದೇಶಕ್ಕೆ ಸ್ವತಂತ್ರ ತಂದುಕೊಟ್ಟರು. ತಮ್ಮ ಇಡೀ ಜೀವನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಮುಡಿಪಿಟ್ಟ ಮಹಾತ್ಮರು. ಯಾವುದೇ ಆಸೆ ಆಕಾಂಕ್ಷೆಗಳನ್ನು ಹೊಂದದೇ ತಮ್ಮನ್ನು ತಾವು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡರು. ಸ್ವಾತಂತ್ರ್ಯ ಈ ದೇಶವನ್ನು ಸುಂದರ ರಾಷ್ಟ್ರ ವನ್ನಾಗಿ ಮಾಡಲು ಶ್ರಮಿಸಿದರು ಎಂದರು.

 ಸಮಾಜದಲ್ಲಿ ಇರುವ ಅಸಮಾನತೆ ಹೋಗಲಾಡಿಸುವುದು, ಸ್ರ್ತೀ ಸ್ವಾತಂತ್ಯ. ಸ್ವದೇಶಿ ವಸ್ತುಗಳ ಬಳಕೆ, ಹರಿಜನರ ಅಭಿವೃದ್ಧಿ, ಮದ್ಯಪಾನ ನಿಷೇಧ, ಗೋಹತ್ಯೆ ನಿಷೇಧ , ಅಸ್ಪೃಶ್ಯತೆ ನಿಷೇಧ ಇವುಗಳಿಗೋಸ್ಕರ ಹೋರಾಡಿದವರು. ಗಾಂಧೀಜಿಯವರು ಸ್ವಾತಂತ್ರ್ಯ ನಂತರ ರಾಮರಾಜ್ಯದ ಕನಸು ಕಂಡವರು. ಪ್ರಾಮಾಣಿಕವಾಗಿ ಕೆಲಸ ಮಾಡುವುದು, ಅಸ್ಪೃಶ್ಯತೆ ಹೋಗಲಾಡಿಸುವುದು, ಭ್ರಷ್ಟಾಚಾರ ನಿರ್ಮೂಲನೆ ಇವೆಲ್ಲವುಗಳು ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಯಾಗಿದ್ದು ಅವರ ಸಂದೇಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

 ಶ್ರಮ ಇಲ್ಲದ ಸಂಪತ್ತು, ಪ್ರಜ್ಞೆ ಇಲ್ಲದ ಸಂತೋಷ, ತತ್ವವಿಲ್ಲದ ರಾಜಕೀಯ, ಬುಡ ಇಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ ಮಾನವೀಯತೆ ಇಲ್ಲದ ವಿಜ್ಞಾನ, ತ್ಯಾಗ ಇಲ್ಲದ ಪೂಜೆ ಇವೆಲ್ಲವುಗಳು ನಿರರ್ಥಕ. ಗಾಂಧೀಜಿಯವರ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಸಲ ಹೆ ಮಾಡಿದರು.

 ಮಾಜಿ ಪ್ರಧಾನಿ ಲಾಲ್‌ಬಹದ್ದೂರ ಶಾಸ್ತಿçಯವರು ಸರಳ ಜೀವಿಗಳು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡವರು. ಜೈ ಜವಾನ್ ಜೈ ಕಿಸಾನ್ ಎನ್ನುವ ಸಂದೇಶದಿಂದ ದೇಶಕ್ಕೆ ಸೈನಿಕರ ಮತ್ತು ರೈತರ ಮಹತ್ವ ಬಹಳಷ್ಟಿದೆ ಎಂದು ತಿಳಿಸಿದರು. ಈಗಿನ ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಕುರಿತು ಅಧ್ಯಯನ ಮಾಡಬೇಕು ಎಂದು ಶಾಸಕ ಎಸ್.ವಿ.ಸಂಕನೂರ ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಐ.ಕೆ. ಕಮ್ಮಾರ ಮಾತನಾಡಿ ಮಹಾತ್ಮ ಗಾಂಧೀಜಿಯವರ 155 ನೇ ಹಾಗೂ ಲಾಲ್‌ಬಹದ್ದೂರ ಶಾಸ್ತ್ರೀ ಯವರ 120ನೇ ಜನ್ಮ ದಿನಾಚರಣೆ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಈ ಮಹಾನ್ ವ್ಯಕ್ತಿಗಳ ಜೀವನಕ್ಕೂ ಹಾಗೂ ಜನಸಾಮಾನ್ಯರ ವಾಸ್ತವ ಜೀವನಕ್ಕೂ ಅವಲೋಕನ ಮಾಡಬೇಕಾದ ಅಗತ್ಯತೆ ಇದೆ. ಮನುಷ್ಯನ ವಿಚಾರಧಾರೆಗೂ ನಿಲುಕಲಾರದ ಅನೇಕ ಸಾಧನೆಗಳನ್ನು ಈ ಮಹಾನ್ ವ್ಯಕ್ತಿಗಳು ಮಾಡಿದ್ದಾರೆ. ಬ್ರಿಟೀಷರ ಸಂಕೋಲೆಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಅನೇಕರ ತ್ಯಾಗ, ಬಲಿದಾನದಿಂದ ದೊರಕಿದ ಸ್ವಾತಂತ್ರö್ಯದ ಸದುಪಯೋಗಪಡಿಸಿಕೊಳ್ಳುವುದು ಹಾಗೂ ಈಗಿನ ಯುವಕರು ಅರ್ಥಪೂರ್ಣ ಜೀವನಶೈಲಿ ಅಳವಡಿಸಕೊಳ್ಳಬೇಕು. ಅಂದಾಗ ಮಾತ್ರ ಸ್ವಾತಂತ್ರ್ಯ ದ ನಮ್ಮ ದೇಶದ ಋಣ ತೀರಿಸಿದಂತಾಗುತ್ತದೆ. ದೇಶಪ್ರೇಮಿಗಳ ಸಂದೇಶಗಳನ್ನು ಸಾರುವ ಕೆಲಸವಾಗಬೇಕು ಎಂದು ವಿವರಿಸಿದರು.

 ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸ್ವಚ್ಛತೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಸುಮನ್ ಕುಲಕರ್ಣಿ-ಭಗವದ್ಗೀತೆ, ಕುಮಾರಿ ವೈನಾ ಮಕಾನದಾರ – ಕುರಾನ್ , ಅಲ್ವಿದಾ ದಲಭಂಜನ - ಬೈಬಲ್ ಪಠಿಸುವುದರ ಮೂಲಕ ಸರ್ವಧರ್ಮ ಪ್ರಾರ್ಥನೆ ಪ್ರಸ್ತುತಪಡಿಸಿದರು.

 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎಂ.ಬಿ.ಸಂಕದ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೋತದಾರ, ತಹಶೀಲ್ದಾರರಾದ ಶ್ರೀನಿವಾಸ ಕುಲಕರ್ಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿ ಗಳು ಹಾಜರಿದ್ದರು.

ವೆಂಕಟೇಶ ಅಲ್ಕೋಡ ಅವರು ಗಾಂಧೀಜಿಯ ಪ್ರಿಯ ಭಜನೆಗಳನ್ನು ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

02/10/2024 05:16 pm

Cinque Terre

10.36 K

Cinque Terre

0

ಸಂಬಂಧಿತ ಸುದ್ದಿ