ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ‌ ಜಿಲ್ಲೆಯಲ್ಲಿ ಮಳೆ‌ ಅಬ್ಬರ:ಹಿಂಗಾರು ವೇಳೆ ಮಳೆ: ರೈತರ‌ ಮೊಗದಲ್ಲಿ ಮಂದಹಾಸ

ಗದಗ: ಮುದ್ರಣ ಕಾಶಿ ಗದಗ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ.ಬೆಳಿಗ್ಗೆಯಿಂದ ಮೋಡ ಕವಿದ‌ ವಾತಾವರಣವಿದ್ದು ಇದೀಗ ಮುದ್ರಣ ನಗರಿ ಗದಗ ಬೆಟಗೇರಿ ಅವಳಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

ಧಾರಾಕಾರ ಮಳೆಗೆ ನಗರದ ಜನತೆ ಹೈರಾಣಾಗಿದ್ದಾರೆ ಇತ್ತ ಗದಗ‌ ಸೇರಿದಂತೆ, ಗಜೇಂದ್ರಗಡ,ಮುಂಡರಗಿ, ಲಕ್ಷ್ಮೇಶ್ವರ, ನರಗುಂದ ಭಾಗದಲ್ಲೂ ಮೋಡ ಕವಿದ ವಾತಾವವರಣ ಉಂಟಾಗಿದ್ದು ಮಳೆ ಆರಂಭವಾಗಿದೆ.ಹಿಂಗಾರು ವೇಳೆಗೆ‌ ಈ ಮಳೆ‌ಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ನಗರದಲ್ಲಿ ವಾಹನ ಸವಾರರು, ಬೀದಿ ಬದಿ ವ್ಯಾಪಾರಸ್ಥರು, ಸಾರ್ವಜನಿಕರು ಪರದಾಟ‌‌ ಮಳೆಗೆ ಅನುಭವಿಸುತ್ತಿದ್ದು ನಗರದ ರಸ್ತೆಗಳ ಮೇಲೆ ಮಳೆ ನೀರು ನದಿಗಳಂತೆ ಹರಿಯುತ್ತಿದೆ.

Edited By : PublicNext Desk
Kshetra Samachara

Kshetra Samachara

06/10/2022 12:32 pm

Cinque Terre

9.04 K

Cinque Terre

0