ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಬೆಳೆಹಾನಿ ಪರಿಹಾರ ಒದಗಿಸಲು ರೈತರಿಂದ ತಹಶೀಲ್ದಾರರಿಗೆ ಮನವಿ

ಗದಗ: ಜಿಲ್ಲೆ ಶಿರಹಟ್ಟಿಯಲ್ಲಿ ಬೆಳೆ ಪರಿಹಾರ ಶೀಘ್ರವಾಗಿ ಒದಗಿಸಬೇಕೆಂದು ಶಿರಹಟ್ಟಿ ತಾಲೂಕು ಸಮಸ್ತ ರೈತರು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಪ್ರಸ್ತುತ ಧಾರಾಕಾರವಾಗಿ ಸುರಿದ ಮಳೆಯಿಂದ ಅನೇಕ ಮನೆಗಳು ಬಿದ್ದಿವೆ ಜೊತೆಗೆ ರೈತರ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ.

ಆದರೆ ರಾಜ್ಯ ಸರ್ಕಾರವು ಇದುವರೆಗೆ ಬಿಡಿ ಕಾಸು ಬಿಡುಗಡೆ ಮಾಡಿಲ್ಲ. ಸರಕಾರದ ಅನುದಾನಕ್ಕೆ ರೈತರು ಜಪುಸುತ್ತಿದ್ದಾರೆ. ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಕೂಡ. ಆದರೆ ನಿರ್ಲಕ್ಷ ತೋರುವ ಅಧಿಕಾರಿಗಳಿಂದ ಸರಿಯಾದ ಸಮಯಕ್ಕೆ ರೈತರಿಗೆ ಯೋಜನೆಗಳು ತಲುಪುತ್ತಿಲ್ಲ.

ಕೇವಲ ಸರ್ಕಾರಗಳು ರೈತರ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಾ ಬಂದಿವೆ. ಆದರೆ ಇಲ್ಲಿವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಆದ್ದರಿಂದ ರೈತರ ಬಗ್ಗೆ ನಿರ್ಲಕ್ಷ ತೋರುವ ಅಧಿಕಾರಿಗಳನ್ನು ಸರಕಾರ ಕೂಡಲೇ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಮತ್ತು ಮನೆ ಕಳೆದುಕೊಂಡ ಬಡವರಿಗೆ ತಕ್ಷಣ ಸೂಕ್ತ ಸಹಾಯ ಒದಗಿಸಬೇಕು. ರೈತರ ಬೆಳೆ ಸಂಪೂರ್ಣ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಆದ್ದರಿಂದ ಎಲ್ಲಾ ರೈತರಿಗೆ ಬೆಳೆಹಾನಿ ಪರಿಹಾರ ಒದಗಿಸಬೇಕು ಇಲ್ಲದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಕಡಕ್ ಎಚ್ಚರಿಕೆಯನ್ನು ನೀಡಿದರು.

Edited By : Shivu K
PublicNext

PublicNext

26/09/2022 06:44 pm

Cinque Terre

14.01 K

Cinque Terre

0