ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಹೊರವಲಯದಲ್ಲಿ ಇರುವ ಗೌಳಿಯವರ ಹೊಲದ ಹತ್ತಿರ ಚಿರತೆ ದಾಳಿಗೆ ಕುರಿಗಳು ಸಾವನ್ನಪಿರುವ ಘಟನೆ ಜರುಗಿದೆ.
ಕಡಕೋಳ ಗ್ರಾಮದ ಕಪ್ಪತ್ತಗುಡ್ಡ ಹತ್ತಿರದ ರವಿವಾರ ರಾತ್ರಿ ಲಕ್ಷ್ಮಣ ಹಾಡಕರ ಎನ್ನುವ ಕುರಿಗಾಯಿಯ ಕುರಿಗಳ ಮೇಲೆ ಚಿರತೆ ದಾಳಿ ಮಾಡಿ 7 ಕುರಿಗಳನ್ನು ತಿಂದು ಹಾಕಿ ಉಳಿದ ಕುರಿಗಳನ್ನು ಬಿಟ್ಟು ಹೋಗಿವೆ ಎನ್ನಲಾಗುತ್ತಿದೆ.
ಚಿರತೆಯೂ 7 ಕುರಿಗಳ ಮೇಲೆ ದಾಳಿ ಮಾಡಿದ್ದಲ್ಲದೇ ನಾಯಿಯ ಮೇಲೂ ದಾಳಿ ಮಾಡಿ ಕೊಂದು ಹಾಕಿದೆ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಕುರಿಗಾಯಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕುರುಬರ ಸಮಾಜದ ಅಧ್ಯಕ್ಷ ಮಂಜುನಾಥ ಗಂಟಿ ಒತ್ತಾಯಿಸಿದ್ದಾರೆ.
Kshetra Samachara
12/09/2022 05:52 pm