ಗದಗ: ರಾಜ್ಯದಲ್ಲಿಯೇ ದಿನವೊಂದಕ್ಕೆ ದಾಖಲೆಯ ಪ್ರಮಾಣದ ಮಳೆಯಾಗಿರುವದರಿಂದ ಈ ಮಳೆಯಿಂದ ನಾಗಾವಿ ಬೆಳದಡಿ ಮುಖ್ಯ ರಸ್ತೆಯು ಕೊಚ್ಚಿಕೊಂಡು ಹೋಗಿ ಸಂಪರ್ಕ ಕಳೆದುಕೊಂಡು 40 ಅಡಿ ಗುಂಡಿ ಬಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ತಾಲೂಕಿನ ನಾಗಾವಿ ಗ್ರಾಮದಲ್ಲಿ ಮಳೆರಾಯ ಭಯಾನಕತೆಯನ್ನು ತೋರಿಸುತ್ತಿದ್ದಾನೆ. ಈ ಮಳೆಯಿಂದ ಶಿರುಂದ ಎಲಿಶಿರುಂದ, ಬೆಳದಡಿ ತಾಂಡಾ ಹರ್ತಿ ನಾಗಾವಿ ತಾಂಡಾದ ರೈತರ ಜಮೀನುಗಳಿಂದ ಹರಿದು ಬರುತ್ತಿರುವ ನೀರಿನಿಂದ ಬೆಳೆಗಳು ನಾಶವಾಗಿವೆ.. ನಾಗಾವಿ ಸುತ್ತಮುತ್ತಲಿನ ಸುಮಾರು 5 ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿದ್ದು, ಅಲ್ಲದೇ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ರೈತರ ಜಮೀನುಗಳು ಬಂಜರು ಭೂಮಿಗಳಾಗಿ ಪರಿವರ್ತನೆಗೊಂಡಿವೆ.
Kshetra Samachara
12/09/2022 05:11 pm