ಗದಗ : ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗದಗ ಜಿಲ್ಲೆ ನರೇಗಲ್ಲ್ ಪಟ್ಟಣದ 15ನೇ ವಾರ್ಡಿನ ಹಿರೇಮಠ ಓಣಿಯ ನಿವಾಸಿ ಶರಣಪ್ಪ ಮಡಿವಾಳರ ಎಂಬುವರ ಮನೆ ಮಂಗಳವಾರ ರಾತ್ರಿ ಹತ್ತು ಗಂಟೆಗೆ ಬಿದ್ದಿದ್ದು ಮನೆಯಲ್ಲಿದ್ದ ಕುಟುಂಬದ ಸದಸ್ಯರಿಗೆ ಗಾಯವಾಗಿವೆ.
ಊಟ ಮಾಡಿ ಕುಳಿತದ ವರದಿಗಾರ ನಿಂಗಪ್ಪ ಮಡಿವಾಳರ ಅವರ ಮೇಲೆ ಬಲಗಡೆ ಭಾಗದ ಗೋಡೆಯು ಬಿದ್ದ ಪರಿಣಾಮ ಕಾಲು ಹಾಗೂ ತೊಡೆಯ ಭಾಗಕ್ಕೆ ಪೆಟ್ಟಾಗಿದೆ. ಮನೆಯಲ್ಲಿ ಇದ್ದ ವಯಸ್ಸಾದ ತಾಯಿ ಶಾಂತಮ್ಮ ಮಡಿವಾಳರ ಅವರು ಮಣ್ಣಿನಲ್ಲಿ ಸಿಲುಕಿದ್ದು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಇನ್ನು ಮನೆ ಬಿದ್ದ ಶಬ್ದಕ್ಕೆ ಹಾಗೂ ಕುಟುಂಬದ ಸದಸ್ಯರ ಧ್ವನಿಗೆ ಓಡೋಡಿ ಬಂದ ನೆರೆಹೊರೆಯವರು ಮಣ್ಣಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ನಂತರ ವರದಿಗಾರ ನಿಂಗಪ್ಪ ಮಡಿವಾಳರ ಹಾಗೂ ಅವರ ತಾಯಿ ಶಾಂತಮ್ಮ ಮಡಿವಾಳರ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮನೆ ಕುಸಿಯು ಸಂದರ್ಭದಲ್ಲಿ ಮನೆಯ ಇತರೆ ಮಹಿಳಾ ಸದಸ್ಯರು, ಮಕ್ಕಳು ಅಡುಗೆ ಮನೆಯಲ್ಲಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.
ಈ ಓಣಿಯಲ್ಲಿ ನಾಲ್ಕು ಮನೆಗಳ ಗೋಡೆ, ಮೇಲ್ಛಾವಣಿ ಹಾಗೂ ಮುಂದಿನ ಭಾಗದ ಗೋಡೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿವೆ. ಯಾವುದೇ ಸಂದರ್ಭದಲ್ಲಿ ಬೀಳಬಹುದು ಆದ್ದರಿಂದ ಇಲ್ಲಿನ ನಿವಾಸಿಗಳು ಭಯದಿಂದ ಜೀವನ ನಡೆಸುತ್ತಿದ್ದಾರೆ.
Kshetra Samachara
14/09/2022 12:30 pm