ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕೆಸರು ಗದ್ದೆಯಂತಾದ ರಸ್ತೆ ಅಭಿವೃದ್ಧಿ ಪಡಿಸಲು ಒತ್ತಾಯ

ಗದಗ: ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರದ ಬಸವೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಇರುವ ಒಳಚರಂಡಿಲ್ಲಿ ಸತತವಾಗಿ ನೀರು ಹರಿಯುತ್ತಿರುವ ಪರಿಣಾಮ ರಸ್ತೆ ಎಲ್ಲಾ ಕೆಸರಿನ ಗದ್ದೆಯಂತೆ ಮಾರ್ಪಟ್ಟಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾರ್ಡಿನ ನಿವಾಸಿಗಳು ನರಕಯಾತನೆ ಅನುಭವಿಸುವಂಥಾಗಿದೆ.

ಬೈಕ್ ಹಾಗೂ ವಾಹನ ತೆಗೆದುಕೊಂಡು ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ತಮ್ಮಜೀವನವನ್ನು ಬಿಗಿಹಿಡಿದು ಕೊಂಡು ಸಂಚಾರ ಮಾಡಬೇಕಾಗಿದೆ ವೃದ್ಧರ, ಮಕ್ಕಳು, ಈ ರಸ್ತೆಯಲ್ಲಿ ಓಡಾಡಲು ಹರಸಹಾಸ ಪಡಬೇಕಾಗಿದೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಈ ರಸ್ತೆಯಲ್ಲಿ ಹರಿಯುತ್ತಿರುವ ಒಳಚರಂಡಿ ನೀರು ಬಂದು ಮಾಡಿ ಸೂಕ್ತ ರಸ್ತೆ ನಿರ್ಮಾಣ ಮಾಡಬೇಕೆಂದು ವಾರ್ಡಿನ ನಿವಾಸಿಗಳು ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

25/09/2022 04:16 pm

Cinque Terre

33.74 K

Cinque Terre

0

ಸಂಬಂಧಿತ ಸುದ್ದಿ