ನರಗುಂದ : ನರಗುಂದ ಪಟ್ಟಣದ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಮಹಾವಿದ್ಯಾಲಯ ಹಾಗೂ ನವಚೇತನ ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಟಾರು ನೀರು ನುಗ್ಗಿ ಸಂಪೂರ್ಣವಾಗಿ ಜಲಾವೃತವಾಗಿದೆ.
ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಪಟ್ಟಣದ ಗಟಾರುಗಳು ಸಂಪೂರ್ಣವಾಗಿ ತುಂಬಿ ಹರಿದಿದ್ದು ಇದರಿಂದ ಪಟ್ಟಣದ ಹೊರವಲಯದಲ್ಲಿನ ಕಾಲೇಜು ಆವರಣಕ್ಕೆ ನೀರು ಹೊಕ್ಕಿದೆ ಈ ಹಿನ್ನೆಲೆಯಲ್ಲಿ ಶಾಲೆ ಆವರಣ ಹಾಗೂ ಕೆಲವು ಕಟ್ಟಡ ಒಳಗಡೆಯು ನೀರು ಹೋಗಿದ್ದು ಇದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ.
ಇನ್ನು ಕೆಲವೆ ದಿನಗಳಲ್ಲಿ ಪರೀಕ್ಷೆ ಸಹ ಹತ್ತಿರ ಬರುತ್ತಿದ್ದು ಈ ರೀತಿಯ ಘಟನೆ ನಡೆದ ಹಿನ್ನಲೆ ವಿದ್ಯಾರ್ಥಿಗಳ ಪಾಲಿಗೆ ದುರಂತವೇ ಸರಿ ಇನ್ನು ಹಿರಿಯ ಪ್ರಾಥಮಿಕ ಶಾಲೆಯು ವಿದ್ಯಾರ್ಥಿಗಳಿಗೆ ಈಗಾಗಲೇ ರಜೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಆದ್ದರಿಂದ ಶಾಲಾ ಆಡಳಿತ ಮಂಡಳಿ ಇನ್ನಾದರು ಎಚ್ಚತ್ತುಕೊಂಡು ಆದಷ್ಟು ಬೇಗ ನೀರು ಹೊರ ಹಾಕುವ ಕಾರ್ಯ ಮಾಡಬೇಕು ಇಲ್ಲದೆ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನಷ್ಟು ಅನುಭವಿಸುವ ಸಾಧ್ಯತೆಯಿದೆ.
PublicNext
05/10/2024 04:07 pm