", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/286525-1736602436-WhatsApp-Image-2025-01-11-at-7.03.35-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MallikarunNaragunda" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನರಗುಂದ: ನರಗುಂದ ಪಟ್ಟಣದಲ್ಲಿ ನಿರ್ಮಾಣವಾದ ಪರಿವೀಕ್ಷಣಾ ಮಂದಿರಕ್ಕೆ ಉದ್ಘಾಟನಾ ಭಾಗ್ಯ ಬೇಕಾಗಿದೆ. ತಾತ್ಕಾಲಿಕವಾಗಿ ಈ ಹಿಂದಿನ ಸಿಎಂ ಉದ್ಘಾಟನೆ...Read more" } ", "keywords": "Naragund, Observation Tower, Incomplete Project, Public Discontent, Karnataka Tourism, Naragund Tourism, Delayed Infrastructure Project, Government Project Delay, Public Grievance, Karnataka News.,Gadag,Government", "url": "https://publicnext.com/article/nid/Gadag/Government" }
ನರಗುಂದ: ನರಗುಂದ ಪಟ್ಟಣದಲ್ಲಿ ನಿರ್ಮಾಣವಾದ ಪರಿವೀಕ್ಷಣಾ ಮಂದಿರಕ್ಕೆ ಉದ್ಘಾಟನಾ ಭಾಗ್ಯ ಬೇಕಾಗಿದೆ. ತಾತ್ಕಾಲಿಕವಾಗಿ ಈ ಹಿಂದಿನ ಸಿಎಂ ಉದ್ಘಾಟನೆ ಮಾಡಿದ್ದರು. ಇನ್ನು ಸರಿಯಾದ ರೀತಿಯಲ್ಲಿ ಪ್ರವಾಸಿಗರಿಗೆ, ಅಧಿಕಾರಿಗಳಿಗೆ, ವಿವಿಧ ರೀತಿಯ ಮುಖಂಡರಿಗೆ ಒದಗಬೇಕಾದ ಪರಿವೀಕ್ಷಣಾ ಮಂದಿರ ಪೀಠೋಪಕರಣ ಇಲ್ಲದೆ ಇನ್ನೂ ಅನಾಥವಾಗಿ ಉಳಿದಿದೆ.
ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ನೀರಾವರಿ ಇಲಾಖೆಯ ಜಾಗೆಯಲ್ಲಿ ನಿರ್ಮಾಣವಾದ ಪರಿವೀಕ್ಷಣಾ ಮಂದಿರ ಅನಾಥವಾಗಿ ಪಾಳು ಬೀಳುತ್ತಿದೆ ಎಂದರೆ ತಪ್ಪಾಗಲಾರದು. 2019ರಲ್ಲಿ ಕಾಮಗಾರಿ ಚಾಲನೆ ನೀಡಿದ್ದರೂ ಗುತ್ತಿಗೆದಾರನ ವಿಳಂಬದಿಂದ 2022ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ಈಗ ಪೀಠೋಪಕರಣಗಳ ಕೊರತೆಯಿಂದ ಪ್ರಾರಂಭ ಮಾಡಲಾಗುತ್ತಿಲ್ಲ.
ಈ ಬಗ್ಗೆ ಅಧಿಕಾರಿಗಳು ಕೇಳಿದರೆ ನಾವು ಪೀಠೋಪಕರಣದ ಸಲುವಾಗಿ ಟೆಂಡರ್ ಮೂಲಕ ಆಹ್ವಾನ ನೀಡಲಾಗಿತ್ತು. ಚುನಾವಣೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬದಲಾವಣೆಯಾಗಿರುವ ಕಾರಣ ಅನುದಾನ ಬಿಡುಗಡೆ ಮಾಡಲು ವಿಳಂಬವಾಗುತ್ತಿದೆ. ಆದ್ದರಿಂದ ಕಾಮಗಾರಿ ಮುಗಿದಿದ್ದರೂ ಪರಿವೀಕ್ಷಣಾ ಮಂದಿರ ಪೀಠೋಪಕರಣ ಇಲ್ಲದೆ ಇದ್ದ ಕಾರಣ ಕಾರ್ಯಾರಂಭ ಮಾಡಲು ತೊಂದರೆಯಾಗುತ್ತಿದೆ ಎನ್ನುತ್ತಾರೆ ನೀರಾವರಿ ಇಲಾಖೆಯ ಇಂಜಿನಿಯರ್ ಮಹೇಶ ಓಲೇಕಾರ.
ಅದು ಏನೇ ಇರಲಿ, ಕೋಟಿ ಕೋಟಿ ಹಣ ವ್ಯಯ ಮಾಡಿ ಕಟ್ಟಿದ ಕಟ್ಟಡ ಕಾರ್ಯಾರಂಭ ಮಾಡಬೇಕು ಅಲ್ಲವೇ ? ಇಲ್ಲದೆ ಹೋದರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಕಟ್ಟಡ ಪಾಳು ಬಿದ್ದು ಹಾಳಾಗಬಹುದು ಎನ್ನುತ್ತಾರೆ ಸಾರ್ವಜನಿಕರು. ಆದ್ದರಿಂದ ಆದಷ್ಟು ಬೇಗ ಪರಿವೀಕ್ಷಣಾ ಮಂದಿರ ಅಧಿಕಾರಿಗಳ ಬಳಕೆಗೆ ಹಾಗೂ ಪ್ರವಾಸಿಗರ ಬಳಕೆಗೆ ಬಂದಾಗ ಮಾತ್ರ ಸಾರ್ಥಕವಾದೀತು.
ವರದಿ - ಮಲ್ಲಿಕಾರ್ಜುನ , ಪಬ್ಲಿಕ್ ನೆಕ್ಸ್ಟ್
Kshetra Samachara
11/01/2025 07:04 pm