", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/405356-1737785902-obba.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MallikarunNaragunda" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನರಗುಂದ : ನರಗುಂದ ತಾಲ್ಲೂಕಿನ ಪ್ರಮುಖ ಆಡಳಿತ ಕಛೇರಿಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ಪ್ರಮುಖವಾಗಿ ನೀರಾವರಿ ಇಲಾಖೆ, ತಾಲ್ಲೂಕು ಆಸ್ಪತ್ರೆ,...Read more" } ", "keywords": "Naragund, Government Offices, Staff Shortage, Public Inconvenience, Karnataka Administration, Government Services, Citizen Grievances, Bureaucratic Delays, Staffing Issues,Gadag,Government", "url": "https://publicnext.com/node" } ನರಗುಂದ: ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ - ಹೈರಾಣಾಗುತ್ತಿದ್ದಾರೆ ಸಾರ್ವಜನಿಕರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ - ಹೈರಾಣಾಗುತ್ತಿದ್ದಾರೆ ಸಾರ್ವಜನಿಕರು

ನರಗುಂದ : ನರಗುಂದ ತಾಲ್ಲೂಕಿನ ಪ್ರಮುಖ ಆಡಳಿತ ಕಛೇರಿಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ಪ್ರಮುಖವಾಗಿ ನೀರಾವರಿ ಇಲಾಖೆ, ತಾಲ್ಲೂಕು ಆಸ್ಪತ್ರೆ, ಲೋಕೋಪಯೋಗಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಹೀಗೆ ಪಟ್ಟಣದ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸುವಲ್ಲಿ ಸಿಬ್ಬಂದಿ ಕೊರತೆ ತೊಡಕಾಗಿ ಕಾಡುತ್ತಿದೆ.

ನೀರಾವರಿ ಇಲಾಖೆಯಲ್ಲಿ 30 ಸಿಬ್ಬಂದಿ ಮಾಡುವ ಕೆಲಸವನ್ನು ಒಬ್ಬನೇ ಅಧಿಕಾರಿ ಮಾಡಬೇಕಾದ ಅನಿವಾರ್ಯತೆ ಇದೆ. ನೀರಾವರಿ ಇಲಾಖೆಯಲ್ಲಿನ‌ ಪ್ರಮುಖ ಇಂಜಿನಿಯರ್‌ಗಳು ಹಾಗೂ ಇತರೆ ಸಿಬ್ಬಂದಿ ಇಲ್ಲದೇ ಮೂರು ಆಫೀಸ್‌ಗಳಿಗೆ ಒಬ್ಬರೇ ಅಧಿಕಾರಿ ಇದ್ದು ಲೆಕ್ಕ ಪತ್ರ ನಿರ್ವಹಣೆ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವುದು, ಹಾಗೂ ನೀರಿನ ಸರಬರಾಜು ಸರಿಯಾದ ಪ್ರಮಾಣದಲ್ಲಿ ಸಾಗುತ್ತಿರುವದೋ? ಇಲ್ಲವೋ? ಎಂಬುದನ್ನು ಒಬ್ಬರೇ ಅಧಿಕಾರಿ ಗಮನಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸಾಕಷ್ಟು ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಿ ಜನರ ಆರೋಗ್ಯಕ್ಕೆ ಅನುದಾನ, ಇತರೆ ಸೌಲಭ್ಯ ಬರತ್ತಿದ್ರೂ, ತಾಲ್ಲೂಕು. ಆಸ್ಪತ್ರೆಯಲ್ಲಿ 36 ಜನ ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇನ್ನೂ 36 ಸಿಬ್ಬಂದಿಯ ಹಾಗೂ ವೈದ್ಯರ ಅವಶ್ಯಕತೆ ಇದೆ. ಕೃಷಿ ಇಲಾಖೆಯಲ್ಲಿ ಕೂಡ ಅಧಿಕಾರಿಗಳು ಇಲ್ಲದೆ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಲವಾರು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ದರಿಂದ ಕೃಷಿ ಇಲಾಖೆ ಸೇರಿದಂತೆ ಎಲ್ಲಾ ಕಚೇರಿ ಸಿಬ್ಬಂದಿಯನ್ನ ನೇಮಕ ಮಾಡಬೇಕು ಮತ್ತು ರೈತರಿಗೆ ನ್ಯಾಯ ಒದಗಿಸಬೇಕು, ಎಂದು ಕೆ.ಆರ್.ಎಸ್. ಪಕ್ಷದ ಜಿಲ್ಲಾ ಅಧ್ಯಕ್ಷ ಆಗ್ರಹಿಸಿದ್ದಾರೆ.

ಸಾಕಷ್ಟು ಖರ್ಚು ಮಾಡಿ ಭೂಮಿ ಪೂಜೆ ಮಾಡಿ, ಕಟ್ಟಡ ಕಟ್ಟಿ, ಉದ್ಘಾಟನೆ ಮಾಡಿದರೂ ಸಿಬ್ಬಂದಿ ಇಲ್ಲದೆ ಹೋದರೆ, ಹೇಗೆ ? ಅನಾವಶ್ಯಕವಾಗಿ ಸರಕಾರದ ಹಣ ಖರ್ಚು ಮಾಡಿದಂತಾಗಿದೆ. ಆದ್ದರಿಂದ ಆದಷ್ಟು ಬೇಗ ಸರಕಾರ ಎಚ್ಚೆತ್ತುಕೊಂಡು ಸಿಬ್ಬಂದಿಯ ನೇಮಕ ಮಾಡಿಕೊಂಡು ಸುಗಮ ಆಡಳಿತಕ್ಕೆ ಅವಕಾಶ ನೀಡಬೇಕಿದೆ.

ವರದಿ - ಮಲ್ಲಿಕಾರ್ಜುನ ಪಬ್ಲಿಕ್ ನೆಕ್ಸ್ಟ್, ನರಗುಂದ

Edited By : Vinayak Patil
PublicNext

PublicNext

25/01/2025 11:48 am

Cinque Terre

19.61 K

Cinque Terre

0

ಸಂಬಂಧಿತ ಸುದ್ದಿ