ಗದಗ:ವಿಶ್ವಕರ್ಮರು ಸಾವಿರಾರು ವರ್ಷಗಳ ಪ್ರಾಚೀನ ಸಂಸ್ಕೃತಿಯನ್ನು ಹೊಂದಿದ್ದಾರೆ.ವಿಶ್ವಕರ್ಮರು ದೇವಶಿಲ್ಪಿ ಹಾಗೂ ವಾಸ್ತುಶಿಲ್ಪಿಗಳಾಗಿದ್ದಾರೆ.ಆಡುಮುಟ್ಟದ ಸೊಪ್ಪಿಲ್ಲ, ವಿಶ್ವಕರ್ಮರು ಕೆಲಸ ಮಾಡದ ಕ್ಷೇತ್ರಗಳಿಲ್ಲ.ಸಮಾಜಕ್ಕೆ ವಿಶ್ವಕರ್ಮರ ಮಾರ್ಗದರ್ಶನ ದಾರಿದೀಪವಾಗಿದೆ ಎಂದು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ ತಿಳಿಸಿದರು.
ಜಿಲ್ಲಾಡಳಿತ ಭವನದ ಮುಖ್ಯಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಲಾದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್‍ದ ಅಧ್ಯಕ್ಷರಾದ ಎಂ.ಎಸ್. ಕರಿಗೌಡ್ರ ವಾಸ್ತುಶಿಲ್ಪಗಳನ್ನು ಮಾಡುವವರು, ಅನ್ನದಾತನಿಗೆ ನೇಗಿಲು ತಯಾರು ಮಾಡುವವರು ವಿಶ್ವಕರ್ಮರೇ ಆಗಿದ್ದಾರೆ.ಪುರಾತನ ಕಾಲದಿಂದ ಗುರುಕುಲಗಳು ಬದುಕಿನ ಪರಂಪರೆಯನ್ನು ತೋರಿಸಿಕೊಡುತ್ತಿದ್ದವು.ಮನೆಯಲ್ಲಿ ತಾಯಿ ಹಾಗೂ ಗುರುಹಿರಿಯರ ಮಾರ್ಗದರ್ಶನದಿಂದಲೇ ಪ್ರತಿಯೊಬ್ಬರೂ ಯಶಸ್ಸನ್ನು ಕಾಣುತ್ತಿದ್ದರು.ಕೃಷಿಗೆ ಅನ್ನದಾತನೇ ಬೆನ್ನೆಲುಬಾದರೆ ಅನ್ನದಾತನಿಗೆ ನೇಗಿಲು, ಕೃಷಿ ಸಲಕರಣೆಗಳನ್ನು ತಯಾರು ಮಾಡಿಕೊಡುವ ಹೆಮ್ಮೆ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಬಾಕಳೆ, ಗದಗ ಜಿಲ್ಲಾ ವಿಶ್ವಕರ್ಮ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಕಾರ್ಯಕ್ರಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ವಂದಿಸಿದರು.
Kshetra Samachara
17/09/2022 08:25 pm