ಗದಗ: ಇಚ್ಛೆಯನರಿತು ಜೀವನ ನಡೆಸೋ ಪತ್ನಿ. ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನು ಉಪ ಜೀವಕ್ಕೆ ಇಷ್ಟೆಲ್ಲ ಇದ್ರೂ ಮಗುವಿನ ಕೊರತೆಯೊಂದು ಆ ದಂಪತಿಗೆ ಕಾಡ್ತಿತ್ತು.
ಕೆಲ ವರ್ಷದ ನಂತ್ರ ದೇವರ ಆಶೀರ್ವಾದದಿಂದ ಮಗು ಹುಟ್ಟಿತು ಆದ್ರೆ, ಅದ್ಯಾರ ಕಣ್ಣು ಆ ಕುಟುಂಬಕ್ಕೆ ಬಿತ್ತೋ ಏನೋ ಹುಟ್ಟಿದ ಮಗು ಅಲ್ಪಾಯುಷಿಯಾಗಿತ್ತು.
ಮಗುವಿನ ಅಗಲುವಿಕೆಯ ಕೊರಗಿನಲ್ಲಿದ್ದ ಆ ಕುಟುಂಬ, ಕಂದಮ್ಮನ ಪುಣ್ಯ ತಿಥಿಯ ದಿನ ಮಗುವಿನ ಹೆಸರನ್ನ ಶಾಶ್ವತವಾಗಿ ನೆಲೆಯೂರಿಸುವಂತೆ ಮಾಡುತ್ತಿದ್ದಾರೆ. ಮುದ್ದಾದ ಕೂಸು ಮೊನ್ನೆಯವರೆಗೂ ಅಂಗಳದಲ್ಲಿ ಆಡ್ತಿದ್ದ ಕಂದಮ್ಮ ಈಗ ಇಲ್ಲವಾಗಿದೆ. ಅಮ್ಮನ ಮಡಿಲು ಖಾಲಿಯಾಗಿದ್ರೆ, ಮನಸ್ಸುತುಂಬ ಕಂದಮ್ಮನ ನೆನಪೇ ಆವರಿಸಿದೆ.
ಯೆಸ್, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ದ್ಯಾಮಣ್ಣ ನೀರಲಗಿ ಹಾಗೂ ಜ್ಯೋತಿ ನೀರಲಗಿ ಎನ್ನುವ ದಂಪತಿ, ಗ್ರಾಮದಲ್ಲಿ ಜೀವನ್ ಹೆಸರಿನ ಲೇಔಟ್ ನಿರ್ಮಾಣ ಮಾಡ್ತಿದ್ದಾರೆ.
ಲೇಔಟ್ ನಲ್ಲಿ ಸುಮಾರು 40 ಸೈಟ್ ನಿರ್ಮಿಸಿ ಬಡವರಿಗೆ ವಸತಿ ರಹಿತರಿಗೆ ಉಚಿತವಾಗಿ ದಾನ ಮಾಡ್ಬೇಕು ಅಂದುಕೊಂಡಿದ್ದಾರೆ. ಈ ಮೂಲಕ ಬಾಲ್ಯದಲ್ಲೇ ಇಹ ಲೋಕ ತೆಜಿಸಿದ ಕಂದಮ್ಮ 'ಜೀವನ್' ಹೆಸರನ್ನ ಗ್ರಾಮಸ್ಥರು ಶ್ವಾಶ್ವತವಾಗಿ ನೆನಪ್ಪಿಟ್ಟುಕೊಳ್ಳುವಂತೆ ಮಾಡ್ತಿದ್ದಾರೆ.
ಮದ್ವೆಯಾಗಿ ಎಂಟು ವರ್ಷದ ಬಳಿಕ ಜೀವನ್ ಹುಟ್ಟಿದ್ದು. ಕಂದನ ಆಗಮನದಿಂದ ನೀರಲಗಿ ಕುಟುಂಬ ಸಂತೋಷದಲ್ಲಿತ್ತು. ಒಂದು ವರ್ಷ ಆರೋಗ್ಯವಾಗಿದ್ದ ಜೀವನ್ ನಂತ್ರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ 2019 ಡಿಸೆಂಬರ್ 21 ರಂದು ಮೆದುಳು ಜ್ವರದಿಂದ ಮಗು ಇಹಲೋಕ ತೇಜಿಸಿತು.
ಮಗುವಿನ ಟ್ರೀಟ್ಮೆಂಟ್ ಗೆ ಅಂತಾ ಮಾಡಿದ್ದ ಸಾಲವನ್ನ ಮೂರು ಎಕರೆ ಜಮೀನು ಮಾರಾಟ ಮಾಡಿ, ದ್ಯಾಮಣ್ಣ ನೀರಲಗಿ ತೀರಿಸಿದ್ದಾರೆ. ಸದ್ಯ ಇರೋ ಐದು ಎಕರೆ ಜಾಗದಲ್ಲಿ ಒಂದು ಎಕರೆಯಲ್ಲಿ ಲೇಔಟ್ ಮಾಡಿ ದಾನ ಮಾಡ್ಬೇಕು ಎಂದು ಕನಸ್ಸು ಕಟ್ಕೊಂಡಿದ್ದಾರೆ. ಇವರ ಕಾರ್ಯ ನಿಜಕ್ಕೂ ಮಾದರಿ ಅಲ್ವೇ.
ವರದಿ.ಸುರೇಶ ಲಮಾಣಿ ಪಬ್ಲಿಕ್ ನೆಕ್ಸ್ಟ ಗದಗ
PublicNext
30/09/2022 10:03 pm