ಗದಗ: ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಹಾವು, ಚೇಳು, ಏಡಿ ಹೀಗೆ ಅನೇಕ ಪ್ರಾಣಿಗಳು, ಕೀಟಗಳು ಕಾಣೋದು ಕಾಮನ್. ಆದರೆ ಇತ್ತೀಚೆಗೆ ವಿಚಿತ್ರವಾದ ಕೀಟವೊಂದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗ್ತಿದೆ. ಅಂತಹುದೇ ಗದಗ ಜಿಲ್ಲೆಯಲ್ಲೊಂದು ಕಾಣಿಸಿಕೊಂಡಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಜಮೀನಿನಲ್ಲಿ ಈ ಹುಳು ಪತ್ತೆಯಾಗಿದೆ. ಇದು ಮೊಣಚಾದ ಮೈತುಂಬಾ ಮುಳ್ಳಿನಂತೆ ರೋಮಗಳಿರುವ ಕೀಟ. ಡೋಣಿ ರೈತ ಸಿದ್ಧಪ್ಪ ಕುರ್ತಕೋಟಿ ಎಂಬುವರ ಮೈಮೇಲೆ ಇದು ಓಡಾಡಿದೆ.ಇದರಿಂದ ಕೆಲಕಾಲ ರೈತ ಮೂರ್ಛೆ ಹೋಗಿದ್ದ ಜೊತೆಗೆ ತಲೆ ಸುತ್ತುವಿಕೆ, ತುರಿಕೆ, ಕೈಕಾಲು ಸೆಳೆತದಿಂದ ಬಳಲಿದ್ದ. ನಂತರ ಊರಲ್ಲಿ ಚಿಕಿತ್ಸೆ ಪಡೆದ ನಂತರ ಸುಧಾರಣೆ ಆಗಿದ್ದಾನೆ ಎಂಬ ಹೇಳಿಕೆ ಸ್ಥಳೀಯರದ್ದು. ಇದು ಗ್ರಾಮದ ಜನರಲ್ಲಿ ಮತ್ತಷ್ಟು ಆತಂಕಮೂಡಿಸಿದೆ. ಕೃಷಿ ಅಧಿಕಾರಿಗಳು ತಜ್ಞರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಅಂತಿದ್ದಾರೆ ಸ್ಥಳಿಯರು.
ರೈತನಿಗಾದ ವಿಷಯ ತಿಳಿದ ಜನ್ರು ಜಮೀನಿಗೆ ತೆರಳಿ ಆ ವಿಚಿತ್ರ ಕೀಟವನ್ನ ಸೆರೆ ಹಿಡಿದಿದ್ದಾರೆ. ಗದಗ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಕಚೇರಿಗೆ ತಂದು ಅಧಿಕಾರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಕೃಷಿ ನಿರ್ದೇಶಕ ಜಿಯಾವುಲ್ಲಾ, ಹೇಳೋದು ಹೀಗೆ.
ವಿಷಕಾರಿ ಕ್ರಿಮಿ ಕೀಟಗಳ ಬಗ್ಗೆ ಇತ್ತೀಚಿಗೆ ಸಾಕಷ್ಟು ವೈರಲ್ ಆಗ್ತಿದೆ. ಇದರ ಬೆನ್ನಲ್ಲೇ ಈ ಹುಳುವೊಂದು ಪತ್ತೆಯಾಗಿದ್ದು, ರೈತರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ. ಆದ್ರೆ ಕೊರೊನಾದಂತಹ ಭಯಾನಕ ಕಾಲಘಟ್ಟವನ್ನೇ ಎದುರಿಸಿದ ಜನತೆಗೆ, ಈ ರೀತಿಯ ಕೀಟವೊಂದರ ಸುದ್ದಿ ಸದ್ದಾಗುತ್ತಿದೆ. ಈ ಬಗ್ಗೆ ಕೀಟ ತಜ್ಞರಿಂದ ಸಂಶೋಧನೆ ಆಗಿ ರೈತರಲ್ಲಿರುವ ಆತಂಕ ಆದಷ್ಟು ಬೇಗ ದೂರವಾಗಲಿ ಎಂಬುದು ನಮ್ಮ ಆಶಯ
PublicNext
18/09/2022 10:37 am