ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಫಿ ನಾಡು ಚಂದುಗೆ ವಾಚ್ ಗಿಫ್ಟ್‌ ಕೊಟ್ಟ ಅನುಶ್ರೀ

ತಮ್ಮದೇ ಶೈಲಿಯಲ್ಲಿ ರೀಲ್ಸ್​ ಮಾಡಿ ಫೇಮಸ್​ ಆದ ಕಾಫಿ ನಾಡು ಚಂದು ಈಗ ನಿರೂಪಕಿ ಅನುಶ್ರೀ ಅವರನ್ನು ಭೇಟಿ ಮಾಡಿದ್ದಾರೆ. ಜೀ ಕನ್ನಡದ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಕಾರ್ಯಕ್ರಮಕ್ಕೆ ಚಂದು ಅತಿಥಿಯಾಗಿ ಬಂದಿದ್ದಾರೆ. ಈ ವೇಳೆ ಅವರನ್ನು ನಟ ಶಿವರಾಜ್​ಕುಮಾರ್​ ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ಚಂದುಗೆ ಅನುಶ್ರೀ ಕಡೆಯಿಂದ ವಿಶೇಷ ಗಿಫ್ಟ್​ ಸಿಕ್ಕಿದೆ.

ನಿರೂಪಕಿಯಿಂದ ವಾಚ್​ ಪಡೆದಿರುವ ಚಂದು ಫುಲ್​ ಖುಷಿ ಆಗಿದ್ದಾರೆ. ಆ ವಿಡಿಯೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಚಂದುಗೆ ಎಲ್ಲ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ವೇದಿಕೆಯಲ್ಲಿ ಏನು ನಡೆಯಿತು ಎಂಬುದರ ಝಲಕ್​ ತೋರಿಸುವ ಪ್ರೋವೋವನ್ನು ಕೂಡ ಕಾಫಿ ನಾಡು ಚಂದು ಶೇರ್​ ಮಾಡಿಕೊಂಡಿದ್ದಾರೆ.

Edited By : Vijay Kumar
PublicNext

PublicNext

28/08/2022 06:11 pm

Cinque Terre

39.87 K

Cinque Terre

0