ಬಿಗ್ ಬಾಸ್‌ನ ಒಟಿಟಿ ಸೀಸನ್ ಒಂದರಲ್ಲಿ 'ನಾನು ಯಾರು?' ಎಂಬ ಟಾಸ್ಕ್ ಆಯೋಜಿಸಲಾಗಿತ್ತು. ಇದರಲ್ಲಿ ಎಲ್ಲ ಸ್ಪರ್ಧಿಗಳು ತಮ್ಮನ್ನು ತಾವು ಪರಿಚಯ ಮಾಡಿಕೊಂಡು ತಮ್ಮ ಬಗ್ಗೆ ತಾವು ಹೇಳಿಕೊಳ್ಳಬೇಕು ಎಂದು ಬಿಗ್ ಬಾಸ್ ಆದೇಶ ನೀಡುತ್ತಾರೆ. ಆ ಪ್ರಕಾರವಾಗಿ ಪುಟ್ಟಗೌರಿ ಖ್ಯಾತಿಯ ನಟಿ ಸಾನಿಯ ಅಯ್ಯರ್ ಕೂಡ ಮಾತನಾಡಿದ್ದಾರೆ.
'ನನ್ನ ತಾಯಿಗಾಗಿ ನನ್ನ ಮಲತಂದೆ ನನ್ನ ಹೆಸರು ಕೆಡಿಸಿದ್ದರು ಎಂಬ ಸಾಲುಗಳನ್ನು ಸಾನಿಯ ಬರೆದಿದ್ದರು. ಈ ಬಗ್ಗೆ ಮಾತನಾಡಿದ ಅವರು, 'ನನ್ನ ತಾಯಿ ಎರಡು ಬಾರಿ ವಿಚ್ಛೇದಿತೆ ಆದವರು. ಒಂದು ನನ್ನ ಬಯೋಲಾಜಿಕಲ್ ಫಾದರ್ ಮತ್ತೊಬ್ಬರು ಫಾದರ್ ಫಿಗರ್. ಬಯೋಲಾಜಿಕಲ್ ಫಾದರ್ ಜೊತೆ ನನ್ನ ಸಂಬಂಧ ಅಷ್ಟಕ್ಕಷ್ಟೆ ಆಗಿತ್ತು. ಏಕೆಂದರೆ ಚಿಕ್ಕ ವಯಸ್ಸಿಗೆ ಅವರಿಂದ ದೂರ ಉಳಿದುಬಿಟ್ಟೆ. ಫಾದರ್ ಫಿಗರ್‌ನ ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿರುವೆ.
ನನ್ನ ತಾಯಿಗೆ ಸ್ನೇಹಿತೆ ಆಗಿರುವಾಗಲೂ ನಾನು ಅವರನ್ನು ನೋಡಿರುವೆ. ಅವರಿಬ್ಬರೂ ಮದುವೆ ಆಗುತ್ತಾರೆ. ಮದ್ವೆ ಆದ್ಮೇಲೆ ಇದು ನನ್ನ ತಪ್ಪು ನಿರ್ಧಾರ ಎಂದು ಆಕೆಗೆ ಅನಿಸಿತು. ಸ್ನೇಹಿತನಾಗಿದ್ದಾಗ ಸಂಬಂಧ ಚೆನ್ನಾಗಿತ್ತು ಆದರೆ ಸಂಗಾತಿ ಆದಾಗ ಚೆನ್ನಾಗಿರಲಿಲ್ಲ. ಇದುವರೆಗೂ ನಾನು ನನ್ನ ಫಾದರ್ ಫಿಗರ್ ಜೊತೆ ಒಂದು ವಿಚಾರ ಹೇಳಿಕೊಂಡಿಲ್ಲ. ಏನೆಂದರೆ ಅವರು ನನ್ನ ಅಮ್ಮನ ಜೀವನದಲ್ಲಿ ಉಳಿಯಬೇಕು ಅಂತ ನನಗೆ ಕೆಟ್ಟ ಹೆಸರು ತರುತ್ತಾರೆ' ಎಂದು ಸಾನಿಯ ಹೇಳಿದ್ದಾರೆ.
ನಾನು ಒಂದು ದಿನ ನನ್ನ ಗೆಳೆಯನ ಜೊತೆ ಬೆಡ್‌ರೂಮ್‌ನಲ್ಲಿ ಇದ್ದೆ. ಆಗ ನಾನು ಬಟ್ಟೆ ಧರಿಸಿದ್ದೆ. ನಾವಿಬ್ಬರೂ ಆಗ ಬೆಡ್ ಮೇಲೆ ಸುಮ್ಮನೇ ಕುಳಿತಿದ್ದೆವು. ಅಲ್ಲಿ ಬಂದ ನನ್ನ ಫಾದರ್ ಫಿಗರ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಂತರ ನಮ್ಮ ಪಕ್ಕದ ಮನೆಗೆ ಹೋಗಿ ಕಿಟಕಿಯಿಂದ ನಮ್ಮ ವಿಡಿಯೋ ಮಾಡಿಕೊಂಡಿದ್ದಾರೆ. ಆದ್ರೆ ಬೇರೇನೋ ಮಾಡಿದಂತೆ ಬಿಲ್ಡಪ್ ಕೊಡುತ್ತಿದ್ದರು. ನಮ್ಮ ಮನೆಯಲ್ಲಿದ್ದರೂ ಅವರು ಸಪರೇಟ್ ಆಗಿರುತ್ತಿದ್ದರು ಆ ಎಲ್ಲಾ ಇರಿಟೇಷನ್ ಇರಬೇಕು ಈ ವಿಡಿಯೋನ ಮೊದಲ ನನ್ನ ಅಜ್ಜಿಗೆ ತೋರಿಸಿದ್ದಾರೆ. ನನ್ನ ಜಾಗದಲ್ಲಿ ಅವರು ಬರಬೇಕು ಅಂತ ಈ ರೀತಿ ಮಾಡುತ್ತಾರೆ.
ನನ್ನ ಅಜ್ಜಿ ಚಿಕ್ಕಮ್ಮ ಮಾತ್ರವಲ್ಲ. ಇಡೀ ಇಂಡಸ್ಟ್ರಿಗೆ ತೋರಿಸುತ್ತಾರೆ. ಈಗಲ್ಲೂ ನನ್ನ ತಾಯಿ ಆ ವಿಡಿಯೋ ನೋಡಿಲ್ಲ ಈಗಲ್ಲೂ ಪ್ರಶ್ನೆ ಮಾಡುತ್ತಾರೆ ಆ ವಿಡಿಯೋದಲ್ಲಿ ಏನಿತ್ತು. ಆ ವಿಡಿಯೋದಲ್ಲಿ ಏನೂ ಇರಲಿಲ್ಲ ನಿನಗೆ ಅವಮಾನ ಮಾಡುವಂತೆ ನಾನು ಏನೂ ಮಾಡಿಲ್ಲ ಅಂತ ಪದೇ ಪದೇ ಹೇಳುವೆ. ಫಾದರ್ ಫಿಗರ್ ಚಿತ್ರರಂಗದವರೇ ಆಗಿರುವ ಕಾರಣ ವಿಡಿಯೋನ ಎಲ್ಲರಿಗೂ ತೋರಿಸಿ ಒಂಟಿ ತಾಯಿಯಾಗಿ ಆಕೆಗೆ ಮಗಳನ್ನು ನೋಡಿಕೊಳ್ಳುವುದಕ್ಕೆ ಅಗುತ್ತಿಲ್ಲ ಎನ್ನುತ್ತಾರೆ' ಎಂದು ತಂದೆ ಮಾಡಿದ ಕೆಲಸದ ಬಗ್ಗೆ ಸಾನಿಯ ಹೇಳಿದ್ದಾರೆ.
PublicNext
09/08/2022 03:31 pm