ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್-09 ಯಾವಾಗ ಶುರು ಆಗುತ್ತದೆ. ಈ ಬಗ್ಗೆ ಅಪ್‌ಡೇಟ್ ಏನು.? ಯಾರೆಲ್ಲ ಸ್ಪರ್ಧಿಗಳು ಇರ್ತಾರೆ ಅನ್ನೋ ಕುತೂಹಲ ಈಗಲೇ ಹುಟ್ಟಿಕೊಂಡಿದೆ.
ಹೌದು. ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಈಗೊಂದು ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
"ನಿರ್ಮಾಣ ಪ್ರಗತಿ"ಯಲ್ಲಿದೆ ಅನ್ನೋ ಕ್ಯಾಪ್ಷನ್ ಕೂಡ ಇದಕ್ಕೆ ಕೊಟ್ಟಿದ್ದಾರೆ. ಆದರೆ, ಇದನ್ನ ನೋಡಿದವ್ರು ಇದು ಬಿಗ್ ಬಾಸ್ ಹೌಸ್ ಅಂತಲೇ ಕಲ್ಪಿಸಿಕೊಂಡಿದ್ದಾರೆ. ಆದರೆ, ಪರಮೇಶ್ವರ್ ಗುಂಡ್ಕಲ್ ಇಷ್ಟು ಬಿಟ್ಟು ಹೆಚ್ಚಿನ ಮಾಹಿತಿಯನ್ನ ಕೊಟ್ಟಿಲ್ಲ. ಆದರೂ, ಈ ಒಂದು ಫೋಟೋ ಅತಿ ಹೆಚ್ಚು ಚರ್ಚೆ ಆಗುತ್ತಿದೆ.
PublicNext
12/07/2022 04:18 pm