ಮುಂಬೈ: ಖಾಸಗಿ ವಾಹಿನಿಯೊಂದರ ಸಿಂಗಿಂಗ್ ರಿಯಾಲಿಟಿ ಶೋನಿಂದ ಬೆಳಕಿಗೆ ಬಂದಂತಹ 'ಇಂಡಿಯನ್ ಐಡಲ್-12' ಖ್ಯಾತಿಯ ಸಾಯಿಲಿ ಕಾಂಬಳೆ ತಮ್ಮ ಗೆಳೆಯ ಧವಲ್ ಅವರೊಂದಿಗೆ ಮಹಾರಾಷ್ಟ್ರ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಸಾಯಿಲಿ, ಧವಲ್ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇಂಡಿಯನ್ ಐಡಲ್ 12ರಲ್ಲಿ ಸಹ-ಸ್ಪರ್ಧಿಗಳಾದ ನಚಿಕೇತ್ ಲೆಲೆ ಮತ್ತು ನಿಹಾಲ್ ಟೌರೊ ವಿವಾಹದಲ್ಲಿ ಭಾಗವಹಿಸಿದ್ದರು. ಸಾಯಿಲಿ ಅವರು ಪ್ರಸ್ತುತ ಸೂಪರ್ ಸ್ಟಾರ್ ಸಿಂಗರ್ ಸೀಸನ್‌ನಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.
PublicNext
25/04/2022 11:23 am