ಮೈಸೂರು: ಮೈಸೂರಿನ ಶಕ್ತಿ ಧಾಮಕ್ಕೆ ಭೇಟಿ ಕೊಟ್ಟ ಶಿವಣ್ಣ ದಂಪತಿ ಭೇಟಿ ನೀಡಿದ್ದಾರೆ. ಪತ್ನಿ ಗೀತಾ ಜೊತೆಗೂಡಿ ಸ್ವತಃ ಕಾರು ಚಲಾಯಿಸಿಕೊಂಡು ಬಂದ ಶಿವರಾಜ್‌ಕುಮಾರ್ ಕಳೆದ ಮೂರು ದಿನಗಳಿಂದ ಶಕ್ತಿ ಧಾಮದ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇಂದು ಸಂಜೆ ನಟ ಶಿವರಾಜ್‌ಕುಮಾರ್ ಮೈಸೂರಿನ ಥಿಯೇಟರ್‌ನಲ್ಲೇ ಜೇಮ್ಸ್ ಸಿನಿಮಾ ನೋಡಲಿದ್ದಾರೆ.
ಶಕ್ತಿಧಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್‌ಕುಮಾರ್, ಡಬ್ಬಿಂಗ್ ಮಾಡುವ ವೇಳೆ ನನಗೆ ತುಂಬಾ ನೋವಾಗ್ತಾ ಇತ್ತು. ಅಪ್ಪು ಇಲ್ಲದ ಹುಟ್ಟು ಹಬ್ಬ ಆಚರಣೆ ತುಂಬಾ ದುಃಖದ ವಿಚಾರ. ಮುಂದೆ ಏನ್ ಇದೆ ಅದನ್ನ ನೋಡಿಕೊಂಡು ಮುಂದೆ ಹೋಗ್ತಾ ಇರಬೇಕು. ಹುಟ್ಟು ಹಬ್ಬಕ್ಕೆ ಇಬ್ಬರೂ ಗಿಫ್ಟ್ ಗಳನ್ನ ಶೇರ್ ಮಾಡ್ತಾ ಇದ್ವಿ. ಅಪ್ಪುಗೆ ಬ್ರಾಂಡ್ ವಾಚ್, ಬೆಲ್ಟ್, ಗಾಗಲ್ ಸಾಕಷ್ಟು ಕೊಟ್ಟಿದ್ದೇನೆ. ಅಪ್ಪು ಎಲ್ಲರ ಹೃದಯದಲ್ಲಿ ಇದ್ದಾನೆ. ಅವನ ಸಿನಿಮಾ ಬಿಡುಗಡೆ ಆಗಿದೆ. ಅವನಿಲ್ಲದ ವೇಳೆ ಸಿನಿಮಾ ಬಿಡುಗಡೆ ಹೆಚ್ಚು ದುಃಖ ತರುತ್ತಿದೆ ಎಂದು ಭಾವುಕರಾದರು.
ಫಿಲ್ಮ್ ಸಿಟಿಗೆ ಪುನೀತ್ ರಾಜ್ ಕುಮಾರ್ ಹೆಸರಿಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪುನೀತ್ ರಾಜ್‌ಕುಮಾರ್ ಹೆಸರಿಟ್ಟರೆ ಸಂತೋಷನೇ ಆಗುತ್ತೆ. ಕುಟುಂಬ ಸದಸ್ಯನಾಗಿ ನಾನು ಆ ರೀತಿಯ ಒತ್ತಾಯ ಮಾಡಲಾರೆ. ಅಭಿಮಾನಿಗಳು ಅಭಿಮಾನದಿಂದ ಹೇಳ್ತಿದ್ದಾರೆ. ಅದರಂತೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟರೂ ಸಂತೋಷ. ಚಿತ್ರರಂಗಕ್ಕೆ ದುಡಿದವರು ಸಾಕಷ್ಟು ಮಂದಿ ಇದ್ದಾರೆ. ಅವ್ರ ಹೆಸರನ್ನೂ ಇಡಬಹುದು ಎಂದರು
PublicNext
17/03/2022 01:15 pm