ಮುಂಬೈ: ಶ್ರೀಲಂಕಾದ ಗಾಯಕಿ ಯೋಹಾನಿ ಹಾಡಿರೋ ಮಾನಿಕೆ ಮಾಗಿ ಹಿತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೇಶ-ವಿದೇಶದಲ್ಲೂ ಈ ಹಾಡಿನ ಗುಂಗು ರಂಗೇರುತ್ತಲೇ ಇದೆ. ಆದರೆ ಇದೇ ಹಾಡನ್ನ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಹಿಂದಿಯಲ್ಲಿ ಹಾಡಿ ಕೂಲ್ ಕೂಲ್ ಅಂತಿದ್ದಾರೆ. ಬನ್ನಿ, ಹೇಳ್ತೀವಿ.
ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಈ ಹಿಂದೇನೂ ಜೈ ಗಂಗಾಜಲ್ ಚಿತ್ರದ ಸಬ್ ಧನ್ ಮತಿ ಹಾಡಿಗೆ ಧ್ವನಿ ಆಗಿದ್ದರು. ಆಗ ಅಷ್ಟೇನೂ ವೈರಲ್ ಆಗದೇ ಇರೋ ಅಮೃತಾ, ಈಗ ಮಾನಿಕೆ ಮಾಗಿ ಹಿತೆ ಹಿಂದಿ ವರ್ಶನ್ ಹಾಡುವ ಮೂಲಕ ಹುಚ್ಚೆಬ್ಬಿಸುತ್ತಿದ್ದಾರೆ.
ಸದ್ಯದ ಸಾಗುತ್ತಿರೋ ಬಿಸಿಯಾದ ರಾಜಕೀಯ ಸಮಯದ ನಡುವೆ ಈ ಕೂಲ್ ಹಾಡು ಕೇಳಿ ಚಿಲ್ -ಪಿಲ್ ಆಗಿಯೇ ಅಂತಲೂ ಗಾಯಕಿ ಅಮೃತಾ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
PublicNext
23/11/2021 06:50 pm