ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟಿಗಟ್ಟಲೆ ಬೆಲೆಬಾಳುವ ಐಲ್ಯಾಂಡ್‌ ಖರೀದಿಸಿದ ಮಿಕಾ ಸಿಂಗ್‌; ವಿಡಿಯೋ ವೈರಲ್‌

ಗಾಯಕ ಮತ್ತು ವಿಶಿಷ್ಟ ಕಂಠಕ್ಕೆ ಹೆಸರುವಾಸಿಯಾಗಿರುವ ಮಿಕಾ ಸಿಂಗ್ (Mika Singh)ಅವರು ಕೋಟಿಗಟ್ಟಲೆ ಬೆಲೆಬಾಳುವ ಖಾಸಗಿ ದ್ವೀಪವನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಹೆಚ್ಚು ವೈರಲ್ ಆಗುತ್ತಿದೆ.

ಆದರೆ, ಆ ಐಲ್ಯಾಂಡ್‌ ಬೆಲೆಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಬಂದಿಲ್ಲ. ಅಷ್ಟೇ ಅಲ್ಲ, ಈ ದ್ವೀಪದೊಂದಿಗೆ 7 ದೋಣಿಗಳು ಮತ್ತು 10 ಕುದುರೆಗಳನ್ನು ಸಹ ಖರೀದಿಸಿದ್ದಾರಂತೆ. ಈ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಮಿಕಾ ತನ್ನ ದ್ವೀಪದಲ್ಲಿ ದೋಣಿ ವಿಹಾರವನ್ನು ಆನಂದಿಸುತ್ತಿರುವುದನ್ನು ಕಾಣಬಹುದು.

ವರದಿಗಳ ಪ್ರಕಾರ, ಮಿಕಾ ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಅವರು ಐಷಾರಾಮಿ ಬಂಗಲೆ ಮತ್ತು ಅನೇಕ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಈ ದಿನಗಳಲ್ಲಿ ಮಿಕಾ ಸಿಂಗ್ ತಮ್ಮ ಖಾಸಗಿ ದ್ವೀಪದಲ್ಲಿ ಆನಂದಿಸುತ್ತಿದ್ದಾರೆ.

Edited By : Abhishek Kamoji
PublicNext

PublicNext

29/09/2022 06:43 pm

Cinque Terre

129.25 K

Cinque Terre

0