ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರ ಜೊತೆ ಸೆಲ್ಫಿಗಾಗಿ ಶಾಲಾ ವಿದ್ಯಾರ್ಥಿನಿಯರು ತಾ ಮುಂದು ನಾ ಮುಂದು ಅಂತಾ ಮುಗಿಬಿದ್ದರು.
ಹೊನ್ನಾಳಿ ತಾಲೂಕಿನ ಹೆಚ್. ಕಡದಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಅಟಲ್ ಇನೋವೇಶನ್ ಮಿಷನ್ ಅಡಿಯಲ್ಲಿ ಮಂಜೂರಾಗಿರುವ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ ವೇಳೆ ಈ ಘಟನೆ ನಡೆಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ರೇಣುಕಾಚಾರ್ಯರ ಆಗಮನದ ವೇಳೆಯೂ ಅದ್ಧೂರಿ ಸ್ವಾಗತ ನೀಡಿದ ವಿದ್ಯಾರ್ಥಿಗಳು, ಖುಷಿ ಖುಷಿಯಾಗಿಯೇ ಫೋಟೋಗೆ ಪೋಸ್ ಕೊಟ್ಟರು. ರೇಣುಕಾಚಾರ್ಯರೂ ಸಹ ಮಕ್ಕಳಿಗೆ ಹುರಿದುಂಬಿಸುವಂತೆ ಸೆಲ್ಫಿ ಫೋಟೋ ತೆಗೆಸಿಕೊಂಡರು.
PublicNext
11/06/2022 08:36 pm