ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಿಸಿಎನ್ ಪದವಿ ಮಹಾವಿದ್ಯಾಲಯ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಬಿಸಿಎನ್ ಕಲರವ ಉತ್ಸವ ನಡೆಯಿತು. ಒಂದು ವಾರ ನಡೆದ ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮಿಸ್ ಮ್ಯಾಚ್ ಸ್ಪರ್ಧೆ, ವೇಷಭೂಷಣ, ಜೋಡಿ ಡ್ರೆಸ್, ನೃತ್ಯ, ಹಾಡು, ಸಂಗೀತ ಹೀಗೆ ವಿವಿದ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇದೆ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಲೋಹಿತ ನೆಲವಿಗಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಆಟ ರಸಮಂಜರಿ ಅಂತಾ ಕಾರ್ಯಕ್ರಮಗಳು ಸಂಗಡಿಸುವುದರಿಂದ ವಿದ್ಯಾರ್ಥಿಗಳ ಪ್ರತಿಬೆಯನ್ನು ಹೊರಗೆ ತೆಗೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಕುಲಕರ್ಣಿ, ಪ್ರಾಚಾರ್ಯ ಡಿ.ಎಸ್ ಪ್ಯಾಟಿ, ರೇವತಿ ನೆಲವಿಗಿ, ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
PublicNext
25/07/2022 05:25 pm