ಬೆಂಗಳೂರು: ಹೊಸೂರು ರಸ್ತೆ ಯ ವೆಂಕಟೇಶ್ವರ ಲೇಔಟ್ ನಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಉತ್ಸವವನ್ನು ಶ್ರದ್ದಾಭಕ್ತಿಗಳಿಂದ ಆಚರಿಸಲಾಯಿತು..
ಶ್ರೀ ಕೈವಾರ ಯೋಗಿ ನಾರೇಯಣ ಯತೀಂದ್ರರು ಹಾಗೂ ಶ್ರೀ ಶಿರಡಿ ಸಾಯಿ ಬಾಬಾ ಆಶ್ರಮದ ಅಭಿವೃದ್ಧಿ ಟ್ರಸ್ಟ್ ವತಿಯಿಂದ ವಿಶೇಷ ಉತ್ಸವ ಏರ್ಪಡಿಸಲಾಗಿತ್ತು.. ಮಾಜಿಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು..
ಎ ಸಿ ಪಿ ಕರಿಬಸವನಗೌಡ ,ಎ ಸಿ ಪಿ ಸುಧೀರ್ ಹೆಗ್ಡೆ ,ಮಾಜಿ ಬಿಬಿಎಂಪಿ ಸದಸ್ಯ ಜಿ. ಮಂಜುನಾಥ್ ಹಾಗೂ ಅನೇಕ ಗಣ್ಯ ವ್ಯಕ್ತಿಗಳು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು .
ಸುಮಾರು 5000 ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.ಜನರು ಮಳೆಯನ್ನು ಲೆಕ್ಕಿಸದೆ ಸಾಲು ಸಾಲಾಗಿ ಬಂದು ಸಾಯಿಬಾಬಾ ದರ್ಶನ ಪಡೆದರು.
---ಪ್ರವೀಣ್ ರಾವ್...
PublicNext
13/07/2022 08:14 pm