ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮ್‌ ಗೋಪಾಲ್ ವರ್ಮ "ಹುಡುಗಿ" ಕನ್ನಡಕ್ಕೂ ಬಂದ್ಲು ನೋಡಿ !

ಬೆಂಗಳೂರು: ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಬಹುಭಾಷೆಯ "ಹುಡುಗಿ" ಚಿತ್ರ ಕನ್ನಡದಲ್ಲೂ ಬರ್ತಿದೆ. ತೆಲುಗು, ತಮಿಳು,ಮಳೆಯಾಳಂ, ಹಿಂದಿಯಲ್ಲೂ ಈ ಚಿತ್ರ ಇದೇ ಜುಲೈ-15 ರಂದು ರಿಲೀಸ್ ಆಗುತ್ತಿದೆ.

ಹುಡುಗಿ ಚಿತ್ರದಲ್ಲಿ ಲವ್ ಟ್ರ್ಯಾಂಗಲ್ ಕಥೆಯನ್ನು ಕೂಡ ಇದ್ದು, ಇಲ್ಲಿ ಮಾರ್ಷಲ್ ಆರ್ಟ್‌ನ ಸಾಹಸ ಅದ್ಭುತವಾಗಿಯೇ ಮೂಡಿಬಂದಂತಿದೆ.

ನಾಯಕ ನಟಿ ಪೂಜ ಬಾಲೇಕರ್ ಕಳೆದ 12 ವರ್ಷದಿಂದಲೂ ಮಾರ್ಷಲ್ ಆರ್ಟ್ ಅಭ್ಯಾಸ ಮಾಡ್ತಿದ್ದಾರೆ. ಅದೇ ಕಲೆ ಈಗ "ಹುಡುಗಿ" ಚಿತ್ರದಲ್ಲೂ ಬಳಕೆ ಆಗಿದೆ. ಚೀನಾದಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದೆ ಎಂದು ಚಿತ್ರ ತಂಡ ಮಾಹಿತಿ ಕೊಟ್ಟಿದೆ.

Edited By :
PublicNext

PublicNext

11/07/2022 11:13 am

Cinque Terre

77.49 K

Cinque Terre

0