ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದಲ್ಲಿ ಮಾದನಾಯಕನಹಳ್ಳಿ ಪೊಲೀಸರು ಕೆಲ ಸಾಕ್ಷಿಗಳನ್ನ ಕಲೆ ಹಾಕಿದ್ದಾರೆ. ಗುರುಪ್ರಸಾದ್ ಮನೆಯನ್ನ ಜಾಲಾಡಿರೋ ಖಾಕಿಗೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಹೀಗಾಗಿ ಆತ್ಮಹತ್ಯೆಗೆ ಅಸಲಿ ಕಾರಣ ಇನ್ನೂ ನಿಗೂಢವಾಗಿದೆ.
ಸಾಯುವ ಮೊದಲು ಡೆತ್ ನೋಟ್ ಬರೆದಿರ ಬಹುದೆಂದು ಪೊಲೀಸರು ಇಡೀ ಫ್ಲ್ಯಾಟ್‌ನಲ್ಲಿ ಡೆತ್ ನೋಟ್‌ಗಾಗಿ ತಡಕಾಡಿದ್ದಾರೆ. ಆದ್ರೆ ಫ್ಲ್ಯಾಟ್ ನಲ್ಲಿ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿಲ್ಲ. ಆದ್ರೆ ಫ್ಲ್ಯಾಟ್ ನಲ್ಲಿ ನಾಲ್ಕು ಮೊಬೈಲ್, ಎರಡು ಟ್ಯಾಬ್, ಒಂದು ಲ್ಯಾಪ್ ಟಾಪ್ ಪತ್ತೆಯಾಗಿದ್ದು, ಇವು ಕೇಸ್‌ಗೆ ಪ್ರಮುಖ ಸಾಕ್ಷಿಯಾಗಲಿವೆ.
ನಾಲ್ಕು ದಿನಗಳ ಕಾಲ ಚಾರ್ಜ್ ಮಾಡದ ಹಿನ್ನೆಲೆ ಮೊಬೈಲ್‌ಗಳು ಸ್ವಿಚ್ ಆಫ್ ಆಗಿವೆ. ಸದ್ಯ ಮೊಬೈಲ್ ಹಾಗೂ ಟ್ಯಾಬ್, ಲ್ಯಾಪ್‌ಟಾಪ್ ನ ಗಳ ಪಾಸ್ ವರ್ಡ್ ಮನೆಯವರಿಗೆ ಗೊತ್ತಿದ್ದರೆ ಪಾಸ್ ವರ್ಡ್ ಓಪನ್ ಮಾಡಿಸಲಾಗುತ್ತದೆ. ಇಲ್ಲವಾದಲ್ಲಿ ಎಫ್‌ಎಸ್‌ಎಲ್‌ಗೆ ಕಳಿಸಿ, ಫೋನ್ ಓಪನ್ ಮಾಡಿಸಿ ಫೋನ್‌ನಲ್ಲಿ ಆತ್ಮಹತ್ಯೆಗೆ ಕಾರಣ ಏನೂ ಅನ್ನೋದಕ್ಕೆ ಏನಾದರೂ ಸಾಕ್ಷಿ ಸಿಗಬಹುದಾ ಎಂದು ಪೊಲೀಸ್ರು ಮಾಹಿತಿ ಕಲೆಹಾಕಲಿದ್ದಾರೆ.
ಮೊಬೈಲ್ ಓಪನ್ ಆದ ಬಳಿಕವಷ್ಟೆ ಅಸಲಿ ಸತ್ಯ ಹೊರಬರುವ ಸಾಧ್ಯತೆಯಿದೆ. ಮೊಬೈಲ್‌ನಲ್ಲಿ ಸಾಯುವ ಮುನ್ನ ವಿಡಿಯೋ ಏನಾದ್ರು ಮಾಡಿದ್ರಾ? ಇಲ್ಲ ಮೊಬೈಲ್ ಅಥವಾ ಲ್ಯಾಪ್‌ಟಾಪ್ ನಲ್ಲಿ ಏನಾದ್ರು ನೋಟ್ ಬರೆದಿಟ್ಟಿದ್ದಾರಾ? ಅನ್ನೋದು ಗೊತ್ತಾಗಬೇಕಿದೆ. ಅಲ್ಲಿಯವರೆಗೂ ಹೆಂಡ್ತಿ ನೀಡಿದ ಕಾರಣವನ್ನೇ ಪರಿಗಣನೆ ಮಾಡಿರುವ ಪೊಲೀಸ್ರು ಸಾಲದ ಸುಳಿಗೆ ಸಿಲುಕಿ ಖಿನ್ನತೆಗೆ ಒಳಗಾಗಿದ್ರು ಅಂತ ಪತ್ನಿ ನೀಡಿರೋ ದೂರಿನ ಮೇಲೆ ತನಿಖೆ ನಡೆಸುತ್ತಿದ್ದಾರೆ.
PublicNext
04/11/2024 08:20 am