ಪ್ರಸಿದ್ಧ ಹಾಸ್ಯ ಕಲಾವಿದ ಹಾಗೂ ಬಾಲಿವುಡ್ ನಟ ರಾಜು ಶ್ರೀವತ್ಸವ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ ಎಂದು ಹೇಳಲಾಗುತ್ತಿದೆ. ಕಾರ್ಯ ನಿಮಿತ್ತ ದೆಹಲಿಗೆ ತೆರಳಿದ್ದ ರಾಜು ಶ್ರೀವತ್ಸವ್ ಹೋಟೆಲ್ ತಂಗಿದ್ದರು. ಈ ವೇಳೆ ಜಿಮ್‌ನಲ್ಲಿ ಹೃದಯಾಘಾತದಿಂದ ಕುಸಿಬಿದ್ದಿದ್ದರು. ರಾಜು ಶ್ರೀವತ್ಸವ್ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆಯನ್ನು ನೀಡಲಾಗಿತ್ತು. ಆದ್ರೀಗ ರಾಜು ಶ್ರೀವತ್ಸವ್ ಅವರ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ ಎಂದು ಹೇಳಲಾಗುತ್ತಿದೆ.
ರಾಜು ಶ್ರೀವತ್ಸವ್ ಆರೋಗ್ಯದ ಬಗ್ಗೆ ಅವರ ಸ್ನೇಹಿತ ಡಾ. ಅನೀಲ್ ಮುರಾರ್ಕ ಮಾಹಿತಿ ನೀಡಿದ್ದಾರೆ. ರಾಜು ಶ್ರೀವತ್ಸವ್ ಅವರ ಮೆದುಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಅವರನ್ನು ಲೈಫ್ ಸಪೋರ್ಟ್‌ನಲ್ಲಿಯೇ ಇಡಲಾಗಿದೆ ಎಂದು ಈ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ. ಬಾಲಿವುಡ್ ನಟ ಶೇಖರ್ ಸುಮನ್ ಕೂಡ ರಾಜು ಶ್ರೀವತ್ಸವ್ ಅವರ ಆರೋಗ್ಯದ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. " ರಾಜು ಶ್ರೀವತ್ಸವ್ ಕಳೆದ 46 ಗಂಟೆಗಳಿಂದ ಪ್ರಜ್ಞಾಹೀನರಾಗಿದ್ದಾರೆ." ಎಂದು ಶೇಖರ್ ಸುಮನ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಹಿನ್ನೆಲೆ ದೇಶ ಅತ್ಯುನ್ನತ ನ್ಯೂರಾಲಜಿಸ್ಟ್ ಡಾ. ಪದ್ಮಾ ಶ್ರೀವತ್ಸವ್ ಅವರನ್ನು ಕೊಲ್ಕತ್ತಾದಿಂದ ಕರೆಸಲಾಗಿದೆ. ನಿನ್ನೆ ಆಗಸ್ಟ್ 17 ರಾತ್ರಿಯಿಂದ ರಾಜು ಅವರ ರಕ್ತದೊತ್ತಡದಲ್ಲಿ ಏರು-ಪೇರಾಗಿತ್ತು. ಸದ್ಯ ಏಮ್ಸ್ ವೈದ್ಯರು ರಾಜು ಶ್ರೀವತ್ಸವ್ ಅವರ ರಕ್ತದೊತ್ತಡವನ್ನು ಹತೋಟಿಗೆ ತಂದಿದ್ದಾರೆ. ಆದರೆ, ಆರೋಗ್ಯ ಸ್ಥಿತಿ ಮಾತ್ರ ತೀರಾ ಗಂಭಿರವಾಗಿಯೇ ಇದೆ ಎಂದು ಹೇಳಲಾಗಿತ್ತಿದೆ.
PublicNext
19/08/2022 12:17 pm