ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಚ್ಚನ ಚಿತ್ರಕ್ಕೆ ಪೈರಸಿ ಏಟು-ಕೇಬಲ್ ಚಾನಲ್‌ನಲ್ಲಿ ವಿಕ್ರಾಂತ್ ರೋಣ ರಿಲೀಸು!

ಕಲಬುರಗಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರಕ್ಕೆ ಪೈರಸಿ ಕಾಟ ವಿಪರೀತ ಇದೆ. ದುರಂತ ಅಂದ್ರೆ,ಕಲಬುರಗಿಯ ಕೇಬಲ್ ಚಾನಲ್‌ವೊಂದರಲ್ಲಿ ವಿಕ್ರಾಂತ್ ರೋಣ ಚಿತ್ರ ಪ್ರದರ್ಶನವಾಗಿ ಬಿಟ್ಟಿದೆ.

ಕಲಬುರಗಿಯ ಕೇಬಲ್ ಚಾನಲ್‌ನಲ್ಲಿ ವಿಕ್ರಾಂತ ರೋಣ ಚಿತ್ರ ಪ್ರದರ್ಶನ ಒಂದು ಕಡೆಯಾದ್ರೆ, ಕೋಲಾರದ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಇಡೀ ಚಿತ್ರವನ್ನ ಮಕ್ಕಳಿಗೆ ಪ್ರದರ್ಶನ ಮಾಡಲಾಗಿದೆ.

ಈ ಕುರಿತು ನಿರ್ಮಾಪಕ ಜಾಕ್ ಮಂಜು ಸಿಟ್ಟಾಗಿದ್ದಾರೆ. ಕೋಲಾರ ಎಸ್‌ಪಿಗೆ ದೂರ ಕೂಡ ಕೊಟ್ಟಿದ್ದಾರೆ. ಮಕ್ಕಳಿಗೆ ಸರಿ ಮತ್ತು ತಪ್ಪು ಹೇಳಿಕೊಡಬೇಕಿರೋ ಶಿಕ್ಷಕರೇ ಹೀಗೆ ಮಾಡಿದರೇ ಹೇಗೆ ಅಂತಲೂ ಜಾಕ್ ಮಂಜು ಬೇಸರದಿಂದಲೇ ಪ್ರಶ್ನೆ ಮಾಡಿದ್ದಾರೆ.

Edited By :
PublicNext

PublicNext

01/08/2022 01:16 pm

Cinque Terre

38.16 K

Cinque Terre

0