ಬೆಂಗಳೂರು:ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇವತ್ತು 60ನೇ ಜನ್ಮ ದಿನ. ಈ ದಿನವೇ ಶಿವರಾಜ್ ಕುಮಾರ್ ಅವರ 127 ನೇ ಚಿತ್ರದ ಒಂದಷ್ಟು ವಿಷಯ ಹೊರ ಬಿದ್ದಿದ್ದು,ಚಿತ್ರ ಇಂಟ್ರಸ್ಟಿಂಗ್ ಪೋಸ್ಟರ್ ಕೂಡ ರಿಲೀಸ್ ಆಗಿದೆ.
ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ರವಿ ಈ ಚಿತ್ರಕ್ಕೆ ನಿರ್ದೇಶನ ಮಾಡೋದು ಖಚಿತವಾಗಿದ್ದು, ಆಗಸ್ಟ್ ತಿಂಗಳಲ್ಲಿಯೇ ಚಿತ್ರದ ಅಧಿಕೃತ ಟೈಟಲ್ ಕೂಡ ರಿವೀಲ್ ಆಗಲಿದೆ.
ಪಕ್ಕಾ ಆ್ಯಕ್ಷನ್ ಪ್ಯಾಕ್ಡ್ ಆಗಿರೋ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಸೂಪರ್ ಹೀರೋ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಇಷ್ಟೆ. ಬಾಕಿ ಮಾಹಿತಿಗಾಗಿಯೇ ವೇಟ್ ಮಾಡಿ.
PublicNext
12/07/2022 01:27 pm